ಬಾಲಕಿಯನ್ನು ಗರ್ಭಿಣಿಯಾಗಿಸಿದ ವ್ಯಕ್ತಿ ಬಂಧನ

0
18

ಬೆಳಗಾವಿ: ಬೆಳಗಾವಿಯ ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಮಕ್ಕಳಿರುವ ತಂದೆಯಿಂದಲೇ ಅಪ್ರಾಪ್ತೆ ಗರ್ಭಿಣಿಯಾದ ಘಟನೆ ನಡೆದಿದೆ.
ಬಾಲಕಿಯ ಪೋಷಕರು ನೀಡಿದ ದೂರಿನ ಅಧಾರದ ಮೇಲೆ ಬಸಪ್ಪ ಅಡಿವೆಪ್ಪ ಹಳ್ಳೂರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಪುಸಲಾಯಿಸಿದ ಬಸಪ್ಪ ಆಕೆಯೊಂದಿಗೆ ನಿರಂತರ ದೈಹಿಕ ಸಂಪರ್ಕವನ್ನು ಬೆಳೆಸಿದ್ದ ಎನ್ನಲಾಗಿದೆ.
ನಿರಂತರ ದೈಹಿಕ ಸಂಪರ್ಕದ ಹಿನ್ನೆಲೆ ಬಾಲಕಿ ೮ ತಿಂಗಳ ಗರ್ಭಿಣಿಯಾಗಿದ್ದಾಳೆ. ವೈದ್ಯರ ಬಳಿ ಬಾಲಕಿಯನ್ನು ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Previous articleಜೇನು ದಾಳಿ: ವ್ಯಕ್ತಿ ಸಾವು
Next articleಕುರಿಗಾಹಿ ಮೇಲೆ ಚಿರತೆ ದಾಳಿ