ಬಾಲಕನಿಗೆ ಲೈಂಗಿಕ ಕಿರುಕುಳ: 58 ವರ್ಷದ ವ್ಯಕ್ತಿ ಬಂಧನ

0
24

ಹುಬ್ಬಳ್ಳಿ: ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಯನ್ನು ಇಲ್ಲಿಯ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ನಗರದ ಹೆಗ್ಗೇರಿ ಬಡಾವಣೆ ನಿವಾಸಿಯಾದ 58 ವರ್ಷದ ಸಿರಾಜುದ್ದೀನ್ ಸೌದಾಗಾರ ಬಂಧಿತ ಆರೋಪಿಯಾಗಿದ್ದು, ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿಯು ಬಾಲಕನನ್ನು ಮುಳ್ಳಿನ ಕಂಟಿಯೊಳಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಮೊದಲು ಆರೋಪಿಯು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ವೇಳೆ ಸಿಕ್ಕಿ ಬಿದ್ದಿದ್ದ. ಆಗ ಬಾಲಕನ ಪೋಷಕರು ಎಚ್ಚರಿಕೆ ನೀಡಿ ಸುಮ್ಮನಾಗಿದ್ದರು.
ಈಗ ಮತ್ತದೇ ರೀತಿ ಬಾಲಕನಿಗೆ ಲೈಂಗಿಕ ಕಿರಕುಳ ನೀಡಿದ ಹಿನ್ನೆಲೆಯಲ್ಲಿ ಹಳೇಹುಬ್ಬಳ್ಳಿ ಠಾಣೆಗೆ ಪೋಷಕರು ಶನಿವಾರ ದೂರು ನೀಡಿದ್ದರು. ದೂರು ನೀಡಿದ ಸ್ವಲ್ಪ ಹೊತ್ತಿನಲ್ಲಿ ಆರೋಪಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಲೈಂಗಿಕ ಕಿರುಕುಳಕ್ಕೊಳಗಾದ ಬಾಲಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Previous articleಹಿರಿಯ ಸಚಿವನ ರಾಜಕೀಯ ಜೀವನ ಮುಗಿಸುವುದಕ್ಕೆ ಹನಿಟ್ರ್ಯಾಪ್
Next articleಎಂಇಎಸ್ ನಿಷೇಧಿಸಿದರೆ ವಿವಾದ ಮುಗಿಯಲ್ಲ