ಬಾಲಕನನ್ನು ಎಳೆದೊಯ್ದ ಮೊಸಳೆ

0
6
ಮೊಸಳೆ

ರಾಯಚೂರು: ಕುರಿಗಾಯಿ ಬಾಲಕನನ್ನು ಮೊಸಳೆ ಎಳೆದುಕೊಂಡು ಹೋಗಿರುವ ಘಟನೆ ಶುಕ್ರವಾರ ತಾಲ್ಲೂಕಿನ ಗಂಜಳ್ಳಿ ಗ್ರಾಮದ ಸಮೀಪ ಕೃಷ್ಣಾ ನದಿಯಲ್ಲಿ ನಡೆದಿದೆ.
ಗಂಜಳ್ಳಿ ಗ್ರಾಮದ ಬಾಲಕ ವಿಶ್ವ(12) ಎಂದು ಗುರುತಿಸಲಾಗಿದೆ. ಬಾಲಕ ಕುರಿಗಳಿಗೆ ನೀರು ಕುಡಿಸಲು ನದಿಗೆ ಹೋದಾಗ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ರಾಯಚೂರು ಗ್ರಾಮೀಣ ಠಾಣೆಯ ಪಿಎಸ್‌ಐ ಪ್ರಕಾಶ ಡಂಬಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ಬಾಲಕನ ಶೋಧ ಕಾರ್ಯಾಚರಣೆ ನಡೆಸಿದ್ದು, ಕತ್ತಲು ಆವರಿಸಿದ ಹಿನ್ನೆಲೆಯಲ್ಲಿ ಶೋಧ ಕಾರ್ಯ ಸ್ಥಗಿತಗೊಳಿಸಿದ್ದಾರೆ. ಬೆಳಿಗ್ಗೆ ಪುನಃ ಶೋಧಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿದುಬಂದಿದೆ.

Previous articleರೀಲ್ಸ್‌ ಮಾಡಿ ಸಸ್ಪೆಂಡ್‌ ಆದ ಡ್ರೈವರ್-ಕಂಡೆಕ್ಟರ್
Next articleಬೆಟ್ಟಿಂಗ್ ದಂಧೆಗೆ ಲಂಚ: ಪಿಎಸ್‌ಐ, ಪೇದೆ ಲೋಕಾಯುಕ್ತರ ಬಲೆಗೆ