ಬೆಂಗಳೂರು: ಬಾಪೂಜಿ ಸೇವಾ ಕೇಂದ್ರಗಳಲ್ಲಿ ಕಳೆದ ನಾಲ್ಕು ತಿಂಗಳುಗಳಲ್ಲಿ ಜನನ – ಮರಣ ನೋಂದಣಿಯ ವಿಲೇವಾರಿಯಾದ ಅಂಕಿಅಂಶಗಳನ್ನು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ಪೋಸ್ಟ್ ಮಾಡಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಕಳೆದ ಜುಲೈ ತಿಂಗಳಿನಿಂದ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಜನನ – ಮರಣ ಪ್ರಮಾಣ ಪತ್ರ ವಿತರಣೆ ಸೇವೆ ಆರಂಭಿಸಲಾಗಿತ್ತು.
ಕಳೆದ ನಾಲ್ಕು ತಿಂಗಳುಗಳಲ್ಲಿ ಜನನ – ಮರಣ ನೋಂದಣಿ ಮತ್ತು ವಿಲೇವಾರಿಯಾದ ಅಂಕಿಅಂಶಗಳು:
ಜನನ ಅರ್ಜಿಗಳ ಸ್ವೀಕಾರ – 5,725
ಜನನ ಅರ್ಜಿಗಳ ವಿಲೇವಾರಿ – 4,980
ಮರಣ ಅರ್ಜಿಗಳ ಸ್ವೀಕಾರ – 71,388
ಮರಣ ಅರ್ಜಿಗಳ ವಿಲೇವಾರಿ – 69,346
ಈ ಸೇವೆ ಪ್ರಾರಂಭವಾಗಿ ಕೆಲವೇ ತಿಂಗಳುಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಿರುವುದು ನಮ್ಮ ಇಲಾಖೆ ಮತ್ತು ಸರ್ಕಾರಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ. ಮುಂದಿನ ದಿನಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮತ್ತಷ್ಟು ಸೇವೆಗಳನ್ನು ಪ್ರಾರಂಭ ಮಾಡುವುದಕ್ಕೆ ನಮ್ಮ ಸರ್ಕಾರವು ಸರ್ವ ಸನ್ನದ್ಧವಾಗಿದೆ ಎಂದಿದ್ದಾರೆ.