ಬಾಣಂತಿ ಸಾವು: ಕುಟುಂಬದವರಿಂದ ಆಕ್ರೋಶಗೊಂಡು ಅಂಬ್ಯುಲೆನ್ಸ್ ಧ್ವಂಸ

0
124

ಮಸ್ಕಿ: ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿ ಎಂದು ಆಕ್ರೋಶ ಭರಿತರಾದ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಧರಣಿ ನಡೆಸಿ ಕಲ್ಲು ಎಸೆದು ಆಂಬ್ಯುಲೆನ್ಸ್ ನ ಗಾಜು ಪುಡಿ ಪುಡಿ ಮಾಡಿದ ಘಟನೆ ಸೋಮವಾರ ನಡೆದಿದೆ.
ಪಟ್ಟಣದ ಸಿದ್ದಮ್ಮ ಬಾಣಂತಿಯನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಣಂತಿಯ ಸಾವು ಸಂಭವಿಸಿದ ಮಾಹಿತಿ ಹರಡುತ್ತಿದ್ದಂತೆ ಆಸ್ಪತ್ರೆಯ ಮುಂದೆ ಕುಟುಂಬ್ಥರು ಹಾಗೂ ಜನರು ಜಮಾವಣೆಗೊಂಡು ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವಿಗೀಡಾಗಿದ್ದಾಳೆ ಎಂದು ಆಂಬ್ಯುಲೆನ್ಸ್ ವಾಹನದ ಗಾಜು ಹೊಡೆದು ಹಾಕಿದ್ದಾರೆ. ಬಾಣಂತಿಯ ಸಾವಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ವೆಂದು ಆರೋಪಿಸಿ ಪ್ರತಿಭಟನೆ ನಡೆಸಿ ಆಸ್ಪತ್ರೆಯನ್ನು ಬಂದ್ ಮಾಡುವಂತೆ ಆಗ್ರಹಿಸಿದರು. ಆರೋಗ್ಯ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಶಿವಕುಮಾರ, ಲಿಂಗಸುಗೂರು ತಾಲೂಕು ವೈದ್ಯಾಧಿಕಾರಿ ಅಮರೇಶ ಪಾಟೀಲ್ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ. ಉದ್ರಿಕ್ತ ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಹರಸಾಹಸಪಟ್ಟರು.

Previous articleಸಂಚಾರ ಪೊಲೀಸರ ಎಡವಟ್ಟಿನಿಂದ ಮಗು ಸಾವು: ಮೂವರು ASIಗಳು ಅಮಾನತು
Next articleನೀತಿ ಆಯೋಗ ಸಭೆಗೆ ಸಿಎಂ ಗೈರು: ಮಹಾ ಅಪರಾಧ