ಬಾಂಬೇ ಫ್ರೆಂಡ್ಸ್ ಬಂದರೆ ಸ್ವಾಗತ

0
7

ವಿಧಾನಸಭೆ: ಬಾಂಬೆ ಫ್ರೆಂಡ್ಸ್ ಅಷ್ಟೇ ಏಕೆ, ದೆಹಲಿ ಪ್ರೆಂಡ್ಸ್, ಬೆಂಗಳೂರು ಫ್ರೆಂಡ್ಸ್ ಎಲ್ಲರೂ ಬರಲಿ, ಯಾರು ಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಬರಬಹುದು, ಓಪನ್ ಆಫರ್ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬೇರೆ ಪಕ್ಷದಿಂದ ಆಗಮಿಸುವವರಿಗೆ ಸ್ವಾಗತ ಕೋರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸ್ವಾಗತವಿದೆ, ಬಾಂಬೆ ಅಷ್ಟೇ ಅಲ್ಲ ಯಾರೂ ಬಂದರೂ ಬರಲಿ ಎಂದರು.
ದೇವಾಲಯದ ಹುಂಡಿ ಹಣದಲ್ಲಿ ಶೇ.೧೦ ರಷ್ಟು ಸರ್ಕಾರಕ್ಕೆ ಒದಗಿಸಬೇಕು ಎಂಬ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯವಾಗಿ ಕಾಯ್ದೆಯಾಗಿ ಹೊರಬೇಕಾದರೆ ವಿಧಾಸನಭೆಯಲ್ಲಿ ಚರ್ಚೆಯಾಗಬೇಕು, ನಿನ್ನೆ ಏಕೆ ಈ ವಿಷಯದ ಬಗ್ಗೆ ಸದನದಲ್ಲಿ ವಿರೋಧಿಸಲಿಲ್ಲ, ಅಂಜನಾದ್ರಿ ಬೆಟ್ಟಕ್ಕೆ ೧೦೦ ಕೋಟಿ ಅನುದಾನ ಕೊಡುತ್ತಿದ್ದೇವೆ, ಇದು ನಮ್ಮ ಬದ್ಧತೆ ಎಂದರು.

Previous articleಐಪಿಎಲ್‌ನಿಂದ ಶಮಿ ಔಟ್
Next articleಡಿಕೆಶಿ ಎರಡೂವರೆ ವರ್ಷ ಸಿಎಂ ಆಗ್ತಾರೆ