ಬಾಂಗ್ಲಾದೇಶಕ್ಕೆ ಶುರುವಾದ ಢವ ಢವ

0
69

ಹುಬ್ಬಳ್ಳಿ: ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರರಿಗೆ 15 ದಿನಗಳ ನಂತರ ಪ್ರತ್ಯುತ್ತರ ನೀಡಿದ್ದು, ಹಲವು ಉಗ್ರರನ್ನು ಉಡೀಸ್ ಮಾಡಿದ ಬೆನ್ನಲ್ಲೇ ಪಾಕ್ ಪರವಾಗಿ ಮಾತನಾಡಿದ್ದ ಬಾಂಗ್ಲಾದೇಶಕ್ಕೆ ನಡುಕ ಸೃಷ್ಟಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಭಾರತದ ವಿಚಾರದಲ್ಲಿ ಬಾಂಗ್ಲಾದೇಶಕ್ಕೂ ಇದೀಗ ನಡುಕ ಶುರುವಾಗಿದೆ. ಪಾಕಿಸ್ತಾನ, ಚೀನಾ ಮತ್ತು ಬಾಂಗ್ಲಾದೇಶಗಳು ಇತ್ತೀಚಿನ ದಿನಗಳಲ್ಲಿ ಒಂದಾಗಿದ್ದವು. ಅವಿಭಜಿತ ಪಾಕಿಸ್ತಾನದ ವಿಭಜನೆಗೆ ಕಾರಣವಾಗಿದ್ದೇ ಭಾರತ. ಬಾಂಗ್ಲಾದೇಶ ಉದಯಿಸುವುದಕ್ಕೆ ಕಾರಣವಾಗಿದ್ದೇ ಭಾರತ. ಆದರೆ, ಬಾಂಗ್ಲಾದೇಶವು ಇತ್ತೀಚಿನ ದಿನಗಳಲ್ಲಿ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿತ್ತು. ಇದೀಗ ಬಾಂಗ್ಲದೇಶಕ್ಕೂ ನಡುಕ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಭಾರತದ ವಿರುದ್ಧ ಸಂಚಿನಲ್ಲಿ ಪಾಕಿಸ್ತಾನ ಹಾಗೂ ಚೀನಾದ ಶತ್ರು ರಾಷ್ಟ್ರಗಳೊಂದಿಗೆ ಬಾಂಗ್ಲದೇಶವೂ ಸಹ ಗುರುತಿಸಿಕೊಂಡಿತ್ತು. ಇದೀಗ ಪಾಕ್‌ಗೆ ಕೊಟ್ಟಿರುವ ತಿರುಗೇಟು ಬಾಂಗ್ಲದೇಶಕ್ಕೂ ನಡುಕವನ್ನುಂಟು ಮಾಡಿದೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಭೀತಿ ಎದುರಾಗಿರುವಾಗಲೇ ಬಾಂಗ್ಲದೇಶದ ಮಧ್ಯಂತರ ಸರ್ಕಾರದ ನಾಯಕ ಹಾಗೂ ಆರ್ಥಿಕ ತಜ್ಞ ಮೊಹಮ್ಮದ್ ಯೂನಸ್ ಅವರು ಭಾರತದ ಈಶಾನ್ಯ ರಾಜ್ಯಗಳ ವಶಪಡಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಿದ್ದರು. ಈ ಏಳು ರಾಜ್ಯಗಳು ನಮ್ಮ ಹಿಡಿತದಲ್ಲಿವೆ ಎನ್ನುವಂತಹ ಹೇಳಿಕೆ ಇದಾಗಿತ್ತು. ಈ ರೀತಿ ಉಡಾಫೆಯಾಗಿ ಮಾತನಾಡಿದ್ದ ಬಾಂಗ್ಲಾದೇಶಕ್ಕೆ ಪಾಕಿಸ್ತಾನದ ಮೇಲೆ ದಾಳಿಯಾಗಿರುವುದು ನಿಂತ ನೆಲೆದಲ್ಲೇ ಬಿರುಕು ಮೂಡಿರುವ ಅನುಭವ ಆಗಿದೆ.
ಬಾಂಗ್ಲದೇಶವು ಪಾಕ್‌ಗೆ ಬೆಂಬಲ ನೀಡುವ ವಿಚಾರದಲ್ಲಿ ಮಾತನಾಡಿತ್ತು. ಭಾಷಾ ವಿಚಾರವಾಗಿ ವಿಶ್ವದಲ್ಲಿ ನಡೆದ ಮೊದಲ ವಾರ್ ಪಾಕಿಸ್ತಾನ ಹಾಗೂ ಬಾಂಗ್ಲದೇಶದ ನಡುವೆ ನಡೆದಿತ್ತು. ಅಂದು ಅವಿಭಜಿತ ಬಾಂಗ್ಲಾದೇಶವಾಗಿತ್ತು. ಅಂದು ಬಾಂಗ್ಲಾ ಬೆಂಬಲಕ್ಕೆ ಬಂದಿದ್ದು ಭಾರತ ಮಾತ್ರ. ಭಾರತದ ಮಧ್ಯ ಪ್ರವೇಶದಿಂದಲೇ ಬಾಂಗ್ಲಾದೇಶದ ಉದಯವಾಗಿತ್ತು.

Previous articleಪ್ರತೀಕಾರ ತೀರಿಸಿಕೊಳ್ಳುತ್ತೇವೆ
Next articleಆಪರೇಷನ್ ಸಿಂಧೂರ್: ಸೈನಿಕರ ಕಾರ್ಯದಕ್ಷತೆಗೆ ದೊಡ್ಡ ಸಲಾಂ ಎಂದ ಸಿಎಂ