ಬಹುಪಾಲು ತೆರಿಗೆ ಪಡೆದು ರಾಜ್ಯದ ಪಾಲಿನ ತೆರಿಗೆ ಮರಳಿಸುತ್ತಿಲ್ಲ

0
13

ಸಚಿವ ದಿನೇಶ ಗುಂಡುರಾವ್ ಬೇಸರ

ಕಲಬುರಗಿ: ರಾಜ್ಯದಿಂದ ಬಹುಪಾಲು ತೆರಿಗೆ ಪಡೆಯುವ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ತೆರಿಗೆ ನೀಡದಿರುವುದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ ಅವರು ಬೇಸರ ವ್ಯಕ್ತಪಡಿಸಿದರು.
ಗುರುವಾರ ಕಲಬುರಗಿ‌ ನಗರದ ನವೀಕೃತ ಶರಬಸವೇಶ್ವರ ಕೆರೆಯ ಸಾರ್ವಜನಿಕ ಉದ್ಯಾನವನ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಾಲಿನ ತೆರಿಗೆ ಹಣ ನೀಡದೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದರು.
ರಾಜ್ಯದಲ್ಲಿ ಭೀಕರ ಬರಗಾಲವಿದೆ. ಅನ್ನದಾತ ಸಂಕಷ್ಟದಲ್ಲಿದ್ದಾನೆ. ಬರಗಾಲ‌ ಪರಿಹಾರ ಹಣ ಸಹ‌ ಬಿಡುಗಡೆ ಮಾಡುತ್ತಿಲ್ಲ.‌ ನರೇಗಾ ಕೂಲಿ ದಿನ ಹೆಚ್ಚಿಸುತ್ತಿಲ್ಲ. ಹಲವಾರು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಇದ್ದರು.

Previous articleಸೌಮ್ಯೆಯೂ ಅವಳೇ, ರುದ್ರಕಾಳಿಯೂ ಅವಳೇ
Next articleಅಂತರ್ಜಾತಿ ವಿವಾಹಕ್ಕೆ ಸಮಾಜದಿಂದ ದೂರವಿಟ್ಟ ಆರೋಪ