ಬಹುನಿರೀಕ್ಷಿತ ವಾಮನ ಚಿತ್ರದ ಟ್ರೇಲರ್​ಅನಾವರಣ

0
18

ಬೆಂಗಳೂರು: ನಾಯಕ ನಟ ಧನ್ವೀರ್​ ಅಭಿನಯಿಸಿರುವ ಬಹುನಿರೀಕ್ಷಿತ ವಾಮನ ಚಿತ್ರದ ಟ್ರೇಲರ್​ಅನಾವರಣಗೊಂಡಿದೆ.
ನಟ ಧನ್ವೀರ್​​ ಅಭಿನಯದ ಈ ಸಿನಿಮಾ ಟ್ರೇಲರ್​ ಅನ್ನು ಚಾಲೆಂಜಿಂಗ್​ ಸ್ಟಾರ್ ದರ್ಶನ್​​​ ರಿಲೀಸ್​​ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ಮೂಲಕ ಹಾರೈಸಿದ್ದಾರೆ, ನಮ್ಮ ಪ್ರೀತಿಯ ಹೀರೋ ಧನ್ವೀರ್ ಗೌಡ ‘ವಾಮನ’ನಾಗಿ ಏಪ್ರಿಲ್ ೧೦ ರಿಂದ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಟ್ರೈಲರ್ ಸೊಗಸಾಗಿ ಮೂಡಿಬಂದಿದ್ದು ಜನಮೆಚ್ಚುಗೆ ಗಳಿಸುವಲ್ಲಿ ನಂಬಿಕೆ ಹೆಚ್ಚಾಗಿದೆ. ಕನ್ನಡ ಸಿನಿಪ್ರೇಮಿಗಳ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರವು ಎಲ್ಲೆಡೆ ಯಶಸ್ವಿಯಾಗಿ ಅಬ್ಬರಿಸಲಿ ಎಂದು ಆಶಿಸುತ್ತೇನೆ. ಒಳ್ಳೆ ಕನ್ನಡ ಚಿತ್ರಗಳಿಗೆ ನಮ್ಮ ಸೆಲೆಬ್ರಿಟಿಗಳ ಪ್ರೋತ್ಸಾಹ ಎಂದಿನಂತೆ ಸದಾ ಬೆನ್ನೆಲುಬಾಗಿ ನಿಂತರಲಿ ಎಂದಿದ್ದಾರೆ.

ಬಹುನಿರೀಕ್ಷಿತ ವಾಮನ ಚಿತ್ರಕ್ಕೆ ಶಂಕರ್​ ರಾಮನ್ ಆ್ಯಕ್ಷನ್​ ಕಟ್​ ಹೇಳಿದ್ದಾರೆ.​​ ಡೈರೆಕ್ಷನ್​ ಜೊತೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಚೇತನ್​ ಗೌಡ ನಿರ್ಮಾಣದ ಚೊಚ್ಚಲ ಚಿತ್ರ ಇದು. ಅಜನೀಶ್​ ಬಿ.ಲೋಕನಾಥ್ ಅವರ​ ಸಂಗೀತ, ಮಹೇನ್​ ಸಿಂಹ ಅವರ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಭೂಷಣ್​ ನೃತ್ಯ ನಿರ್ದೇಶನ, ಅರ್ಜುನ್​ ರಾಜ್​, ವಿಕ್ರಂ ಮೋರ್​ ಹಾಗೂ ಜಾಲಿ ಬಾಸ್ಟಿನ್​ ಸಾಹಸ ನಿರ್ದೇಶನ ಹಾಗೂ ನವೀನ್​ ಹಾಡೋನಳ್ಳಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Previous articleಯತ್ನಾಳ್ ಉಚ್ಚಾಟನೆ: ನೂರು ದಾಟಿದ ಪದಾಧಿಕಾರಿಗಳ ರಾಜೀನಾಮೆ
Next articleಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ: ಐವರ ಬಂಧನ, 220 ಗ್ರಾಂ ಬಂಗಾರ ವಶ