ಬಸ್ ಪಲ್ಟಿ; 30 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯ

0
14

ರಾಯಚೂರು: ಸ್ಟೇರಿಂಗ್ ಕಟ್ ಆದ ಪರಿಣಾಮ ಬಸ್ ಪಲ್ಟಿ ಹೊಡೆದು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯವಾದ ಘಟನೆ ನಡೆದಿದೆ.
ತಾಲ್ಲೂಕಿನ ಸಗಮಗುಂಟಾ ಸಮೀಪ ಈ ದುರ್ಘಟನೆ ನಡೆದಿದೆ, ಕೊರ್ವಿಹಾಳ ಗ್ರಾಮದಿಂದ ರಾಯಚೂರಿಗೆ ಆಗಮಿಸುತಿದ್ದ ಬಸ್, ದ್ವಿಚಕ್ರ ವಾಹನಕ್ಕೆ ಸೈಡ್ ಕೊಡಲು ಹೋದಾಗ ಸ್ಟೇರಿಂಗ್ ಕಟ್ಟಾಗಿ ರಸ್ತೆ ಪಕ್ಕದ ಜಮೀನಿನಲ್ಲಿ ಉರುಳಿದೆ, ಘಟನೆಯಲ್ಲಿ ಕೊರ್ವಿಹಾಳದ 9 ನೇ ತರಗತಿ ವಿದ್ಯಾರ್ಥಿನಿ ಸಂಗೀತಗೆ ಗಂಭೀರ ಗಾಯಗಳಾಗಿದ್ದು ಆಕೆಯನ್ನು ರಿಮ್ಸ್ ಬೋಧಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿದೆ. ಬಸ್‌ನಲ್ಲಿ ಶಾಲೆಗೆ ತೆರಳುತಿದ್ದ ವಿದ್ಯಾರ್ಥಿಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಮಹಾ ಮಳೆಗೆ ಕಾರವಾರದಲ್ಲಿ ಗುಡ್ಡ ಕುಸಿತ : ನದಿಗೆ ಬಿದ್ದ ಟ್ಯಾಂಕರ್, ಐವರು ನಾಪತ್ತೆ
Next articleಕೆಮ್ಲಿನ್ ಕಂಪಾಸ್‌ ಬಾಕ್ಸ್ ಸಂಸ್ಥಾಪಕ ಸುಭಾಷ್ ದಾಂಡೇಕರ್ ನಿಧನ