ಬಸ್ ಪಲ್ಟಿ: ೯ ಸಾವು

0
38

ಮುಂಬೈ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾದ ಪರಿಣಾಮ ಕನಿಷ್ಠ ಒಂಬತ್ತು ಪ್ರಯಾಣಿಕರು ಸಾವನ್ನಪ್ಪಿದ್ದು, ೨೫ ಮಂದಿ ಗಾಯಗೊಂಡಿದ್ದಾರೆ.
ಪೂರ್ವ ಮಹಾರಾಷ್ಟ್ರದ ಭಂಡಾರಾದಿಂದ ಗೊಂಡಿಯಾ ಜಿಲ್ಲೆಗೆ ತೆರಳುತ್ತಿದ್ದ ಎಂಎಸ್ ಆರ್‌ಟಿಸಿ ಬಸ್ ‘ಶಿವ್ ಶಾಹಿ’ಯಲ್ಲಿ ೩೬ ಜನ ಪ್ರಯಾಣಿಸುತ್ತಿದ್ದರು. ಸದಾಕರ್ಜುನಿ ತಾಲೂಕಿನಲ್ಲಿ ಬಸ್ ನಿಯಂತ್ರಣ ಕಳೆದು ಕೊಂಡಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಸ್ತುವಾರಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಅಪಘಾತದಲ್ಲಿ ಸತ್ತವರ ಕುಟುಂಬಕ್ಕೆ ತಲಾ ೧೦ ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.

Previous articleಯಲ್ಲಮ್ಮನ ಗುಡ್ಡಕ್ಕೆ ಕೇಂದ್ರದಿಂದ ೧೦೦ ಕೋಟಿ ಅನುದಾನ
Next articleಪ್ರತೀಕಾರದ ರೋಚ`ಕಥೆ’