ಬಸ್ ಪಲ್ಟಿ: ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ

0
18

ಮುದಗಲ್: ಮುದಗಲ್ ಪಟ್ಟಣದ ಡೈಮಂಡ್ ದಾಬಾ ಬಳಿ ಇರುವ ಚಿನ್ನಪ್ಪ ದಂಡಾವತಿಯ ಅವರ ಹೊಲದಲ್ಲಿ ಬಸ್ ಪಲ್ಟಿಯಾಗಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಗಾಯಗೊಂಡ ಘಟನೆ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಜರುಗಿದೆ.
ಲಿಂಗಸೂಗೂರು ಸಾರಿಗೆ ಘಟಕದ ಬಸ್ಸು ಲೆಕ್ಕಿ ಹಾಳದಿಂದ ಮುದಗಲ್ ಮಾರ್ಗವಾಗಿ ಲಿಂಗಸಗೂರು ಪಟ್ಟಣಗೆ ಹೋಗುತ್ತಿರುವಾಗ ಡೈಮಂಡ್ ದಾಬಾ ಬಳಿ ಬಸ್ಸಿನ ಮುಂದಿನ ಎಕ್ಸೆಲ್ ಕಟ್ಟಾಗಿರುವುದರಿಂದ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಜಮೀನ್ ಒಂದರಲ್ಲಿ ಬಸ್ಸು ಪಲ್ಟಿಯಾಗಿದೆ. ಬಸ್ಸಿನಲ್ಲಿ 37 ಮಹಿಳೆಯರು 33 ಜನ ವಿದ್ಯಾರ್ಥಿಗಳು ಆರು ಜನ ಪುರುಷರು ಒಂದು ಮಗು ಸೇರಿದಂತೆ 77 ಜನರು ಪ್ರಯಾಣಿಸುತ್ತಿದ್ದರು ಅದರಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ ಬಸ್ಸಿನ ಚಾಲಕ ಬಸವರಾಜ್ ಅನ್ನುವವರಿಗೆ ಎದೆಗೆ ಪೆಟ್ಟು ಬಿದ್ದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಲಿಂಗಸ್ಗೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಘಟನಾಸ್ಥಳಕ್ಕೆ ಪಿಎಸ್ಐ ವೆಂಕಟೇಶ್ ಮಾಡಗೇರಿ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಮುದುಗಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಗೆ ಬಸ್ ನಿರ್ವಹಣೆಯ ಕೊರತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಸಾರಿಗೆ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಗಮನಹರಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈಗಾಗಲೇ ಲಿಂಗಸಗೂರು ಸಾರಿಗೆ ಸಾರಿಗೆ ಘಟಕದ ಬಸ್ಸುಗಳು ಅಲ್ಲಲ್ಲಿ ಅಪಘಾತ ಸಂಭವಿಸಿರುವುದು ಸ್ಮರಿಸಬಹುದಾಗಿದೆ

Previous articleತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟಂತಾಗಿದೆ…
Next articleಕೋರ್ಸ್, ಸಂದರ್ಶನ ಕಲಿಯೋಕೆ ಬಂತು ಎಐ