ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

0
14

ಬೆಳಗಾವಿ: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸಾರಿಗೆ ಬಸ್ ಪಲ್ಟಿಯಾಗಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ನಡೆದಿದೆ.
ಗೋಕಾಕ ರಾಜ್ಯ ಹೆದ್ದಾರಿಯಲ್ಲಿ ತಾಲೂಕಿನ ಖನಗಾಂವ ಕೆ.ಎಚ್. ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಬೆಳಗಾವಿಯಿಂದ ಗೋಕಾಕ ಕಡೆಗೆ ಹೊರಟಿದ್ದ ಸಾರಿಗೆ ಬಸ್‌ಗೆ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸುಳೇಭಾವಿ ಗ್ರಾಮದ ವಿಠ್ಠಲ ದತ್ತಾ ಲೋಕರೆ (29) ಮೃತಪಟ್ಟಿದ್ದು, ಡಿಕ್ಕಿ ಹೊಡೆದ ಬಸ್ ಹೊಲದಲ್ಲಿ ಪಲ್ಟಿಯಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು. ಮಾರೀಹಾಳ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Previous articleಎನ್​ಡಿಎ ನಾಯಕರಾಗಿ ಮೋದಿ ಸರ್ವಾನುಮತದಿಂದ ಆಯ್ಕೆ
Next articleಹಣ್ಣಿಗೆ ವಿಸ ಹಾಕಿ ೩೦ ಮಂಗಗಳ ಮಾರಣ ಹೋಮ