ಕಾರವಾರ: ಕ್ಷುಲ್ಲಕ ಕಾರಣಕ್ಕೆ ಬಸ್ ಅಡ್ಡಗಟ್ಟಿ ಯುವಕನೋರ್ವ ದಾಂಧಲೆ ನಡೆಸಿ ಚಾಲಕ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ಕಾರವಾರ ತಾಲ್ಲೂಕಿನ ಶಿರವಾಡದ ಜಾಂಬಾ ಕ್ರಾಸ್ ಬಳಿ ನಡೆದಿದೆ.
ಶಿರವಾಡ ಮೂಲದ ಸುಭಾಷ್ ಬಾಡ್ಕರ್ ಹಲ್ಲೆ ಮಾಡಿದ ಯುವಕ. ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಸ್ಕೂಟಿ ಚಲಾವಣೆ ಮಾಡುತ್ತಿದ್ದ ಈತ ಕಾರವಾರದಿಂದ ಕಡವಾಡಕ್ಕೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಗೆ ಸೈಡ್ ಬಿಟ್ಟಿರಲಿಲ್ಲ. ಕೊನೆಗೆ ಬಸ್ ಮುಂದೆಯೇ ಸ್ಕೂಟಿ ನಿಲ್ಲಿಸಿ ಚಾಲಕ, ನಿರ್ವಾಹಕರೊಂದಿಗೆ ವಾಗ್ವಾದ ನಡೆಸಿ ಹಲ್ಲೆ ಕೂಡ ನಡೆಸಿದ್ದಾನೆ.
ಘಟನೆಯಲ್ಲಿ ಚಾಲಕ ಮಹ್ಮದ್ ಇಸಾಕ್ ಹಲ್ಲೆಗೊಳಗಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಯುವಕನ ದಾಂಧಲೆ ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.