ಬಸವರಾಜ ಮುತ್ತಗಿಗೆ ಜೀವ ಬೆದರಿಕೆ

0
41

ಧಾರವಾಡಕ್ಕೆ ಬಂದ ಸಿಬಿಐ ಅಧಿಕಾರಿಗಳು

ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣಲ್ಲಿ ಬಂಧನಕ್ಕೊಳಗಾಗಿ ಜಾಮೀನು ಮೇಲೆ‌ ಹೊರಗಿರುವ ಬಸವರಾಜ ಮುತ್ತಗಿಗೆ ಜೀವ ಬೆದರಿಕೆ ಇದೆ ಎನ್ನಲಾಗಿದೆ.
ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಎ೧ ಆರೋಪಿಯಾಗಿರುವ ಬಸವರಾಜ ಮುತ್ತಗಿಗೆ ಅದೇ ಪ್ರಕರಣದ ರ್ಎ ಆರೋಪಿ ಅಶ್ವತ್ಥ ಎಂಬಾತನಿಂದ ಜೀವ ಬೆದರಿಕೆ ಇದೆ. ಅದಕ್ಕಾಗಿ ತಮಗೆ ರಕ್ಷಣೆ‌ ನೀಡಬೇಕು ಎಂದು ೧೭ನೇ ಎಸಿಎಂಎಂ ಕೋರ್ಟ್‌ನಲ್ಲಿ ೧೬೪(೧)ರಡಿ ತಪ್ಪೊಪ್ಪಿಗೆ ಮಾಡಿಕೊಂಡಿದ್ದನು.
ಈ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್ ಅಥವಾ ಸಿಆರ್‌ಎಸ್‌ಎಫ್ ಭದ್ರತೆ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಕೆಲಗೇರಿಯಲ್ಲಿಯ ಬಸವರಾಜ ಮುತ್ತಗಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Previous articleವಿಪಕ್ಷಗಳಿಗೆ ಸಿದ್ದರಾಮಯ್ಯ ಕಂಡರೆ ಭಯ…
Next articleಹಕ್ಕಿಪಿಕ್ಕಿ ಮತ್ತಿತರೆ ಅಲೆಮಾರಿಗಳಿಗೆ ಶೇ 3 ರಷ್ಟು ಮೀಸಲಾತಿ ಕಲ್ಪಿಸಲು ಆಗ್ರಹ