ಬೆಂಗಳೂರು: ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಉ.ಕ. ಭಾಗದ ಮೊದಲ ಎದೆ ಹಾಲು ಬ್ಯಾಂಕ್ ಸ್ಥಾಪನೆ! ಮಾಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ಇದೇ ಮೊದಲ ಬಾರಿಗೆ ‘ಎದೆ ಹಾಲಿನ ಬ್ಯಾಂಕ್’ ವಿಜಯಪುರ ಜಿಲ್ಲಾ ಸರಕಾರಿ ಆಸ್ಪತ್ರೆ ಆವರಣದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆಯಾಗಲಿದೆ.
ವಿಜಯಪುರ ಆಸ್ಪತ್ರೆಯಲ್ಲಿ ವಾರ್ಷಿಕ 10,000 ಹೆರಿಗೆಗಳು ಸಂಭವಿಸುತ್ತಿದ್ದು, 2,000 ಕ್ಕೂ ಹೆಚ್ಚು ಶಿಶುಗಳಿಗೆ ತೀವ್ರ ಆರೈಕೆ ಅವಶ್ಯಕತೆಯಿರುತ್ತದೆ. ಹೊಸ ಎದೆಹಾಲು ಬ್ಯಾಂಕ್, ಈ ಶಿಶುಗಳಿಗೆ ಅಗತ್ಯವಾದ ಪೌಷ್ಠಿಕಾಂಶ ಒದಗಿಸಲು ನೆರವಾಗಲಿದೆ. ಈ ಮಹತ್ವದ ಯೋಜನೆಯು ನವಜಾತ ಶಿಶುಗಳ ಭವಿಷ್ಯಕ್ಕೆ ಹೊಸ ಆಶಾಕಿರಣವನ್ನು ನೀಡಲಿದೆ ಎಂದಿದ್ದಾರೆ.