ಬಳ್ಳಾರಿ ಪಿಡಬ್ಲ್ಯೂಡಿ ಎಂಜಿನಿಯರ್ ಮನೆ ಮೇಲೆ ಲೋಕಾ ದಾಳಿ

0
82

ಬಳ್ಳಾರಿ: ಬಳ್ಳಾರಿ PWD ಸೆಕ್ಷನ್ ಇಂಜಿನೀಯರ್ ಅಮೀನ್ ಮುಕ್ತಾರ್ ಕಲಬುರ್ಗಿ ನಿವಾಸದ ಮೇಲೆ ದಾಳಿ ಬಳಿಕ ಬಳ್ಳಾರಿಯಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಅಮೀನ್ ಮುಕ್ತಾರ್ ಕಲಬುರ್ಗಿ ನಿವಾಸದಲ್ಲಿ ಸಾಕಷ್ಟು ಪ್ರಮಾಣದ ಆಸ್ತಿ ಪತ್ತೆ ಹಿನ್ನೆಲೆ ದಾಳಿ ತಿವ್ರತೆ ಹೆಚ್ಚಳ. ಹೊಸಪೇಟೆ ಲೋಕಾಯುಕ್ತ ಇನ್ಸಪೆಕ್ಟರ್ ಅಮರೇಶ್ ಹುಬ್ಬಳಿ ಅವರ ನೇತೃತ್ವದ ತಂಡವನ್ನ ಬಳ್ಳಾರಿಗೆ ಕಳಿಸಿ ದಾಳಿ ಮಾಡಲಾಗಿದೆ.
ಬಳ್ಳಾರಿ ಹೊಸ ಡಿಸಿ ಕಚೆರಿ ಪಕ್ಕದಲ್ಲಿರುವ ಲೋಕೊಪಯೋಗಿ ಇಲಾಖೆಯ ವೃತ್ತ ಕಚೇರಿ ಮೇಲೆ ದಾಳಿ ಮಾಡಿದ ಲೋಕಾ ಇನ್ಸಪೆಕ್ಟರ್ ಅಮರೇಶ್ ಹುಬ್ಬಳ್ಳಿ ಆ್ಯಂಡ್ ಟೀಂ. ಅಮರೇಶ್ ಹುಬ್ಬಳ್ಳಿ ನೇತೃತ್ವದಲ್ಲಿ ನಾಲ್ಕು ಜನ ಅಧಿಕಾರಿಗಳಿಂದ ಕಚೇರಿಯಲ್ಲಿ ಪರಿಶೀಲನೆ ಮಾಡಲಾಗುತ್ತಿದೆ.
ಅಮೀನ್ ಮುಕ್ತಾರ್ ಅವರ ಚೆಂಬರ್ ನಲ್ಲಿ ದಾಖಲೆಗಳ ಪರಿಶೀಲನೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಅಮೀನ್ ಮುಕ್ತಾರ್ ಅವರ ಮೇಲೆ ಕಲಬುರ್ಗಿಯಲ್ಲಿ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು. ಒಟ್ಟು ಮೂರು ವಾಹನಗಳಲ್ಲಿ ಬಂದಿರುವ ಲೋಕಾಯುಕ್ತ ಅಧಿಕಾರಿಗಳ ತಂಡ.

Previous articleಏಷ್ಯಾದ MRO ಕೇಂದ್ರʼವಾಗಿ ಬೆಂಗಳೂರು
Next articleಕಲಬುರಗಿ ಪಿಡಬ್ಲುಡಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಲೋಕಾ ಬಲೆಗೆ