ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ರೋಡ್ ಶೋ

0
23

ಬಳ್ಳಾರಿ: ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬಿಜೆಪಿ ಬೃಹತ್ ರೋಡ್ ಶೋ ಪ್ರದರ್ಶನ ಆರಂಭವಾಯಿತು.
ಸಂಡೂರಿನ ಎಪಿಎಂಸಿ ಗೇಟ್‌ನಿಂದ ತೆರದ ವಾಹನದಲ್ಲಿ ಬಿಜೆಪಿ ಮುಖಂಡರು ಮೆರವಣಿಗೆ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿ.ಶ್ರೀರಾಮುಲು, ಜನಾರ್ದನರೆಡ್ಡಿ, ಸುನೀಲ್ ಕುಮಾರ್ ಕಾರ್ಕಳ, ಸೋಮಶೇಖರ ರೆಡ್ಡಿ, ಸಣ್ಣ ಫಕೀರಪ್ಪ, ಅನಿಲ್ ಲಾಡ್, ಸುರೇಶಬಾಬು ರೋಡ್ ಶೋ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಮೆರವಣಿಗೆ ಉದ್ದಕ್ಕೂ ಜಾನಪದ‌ ಮೇಳ, ಡೊಳ್ಳು, ಭಾಜ ಭಜಂತ್ರಿ ಗಮನ ಸೆಳೆದವು.

Previous articleಉಪಚುನಾವಣೆ ರಾಜ್ಯದ ದಿಕ್ಸೂಚಿ ಬದಲಿಸಲಿದೆ
Next articleಕಡಲಾಚೆಯ ಖನಿಜಗಳಿಗೆ ಹೊಸ ರಾಯಧನ ದರ