ಬಣ ರಾಜಕೀಯದ ಬಣ್ಣಗಳ ಅನಾವರಣ

ಖುರ್ಚಿ ಕುಸ್ತಿ ಬದಿಗಿಟ್ಟು ಅಭಿವೃದ್ಧಿ ಬಗ್ಗೆ ಯೋಚಿಸಿ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಬಣ ರಾಜಕೀಯದ ಬಣ್ಣಗಳು ಅನಾವರಣಗೊಳ್ಳುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಅಭಿವೃದ್ಧಿ, ಸುಧಾರಣೆ, ಬಡವರ ಏಳಿಗೆ, ಉದ್ಯೋಗ ಸೃಜನೆ, ಉತ್ತರ ಕರ್ನಾಟಕದ ಅಭಿವೃದ್ಧಿ, ಮಹಿಳಾ ಸಬಲೀಕರಣ, ಮೂಲ ಸೌಕರ್ಯ ಅಭಿವೃದ್ಧಿ, ಶಿಥಿಲಗೊಂಡಿರುವ ಶಾಲೆಗಳ ಅಭಿವೃದ್ಧಿ, ಭ್ರಷ್ಟ ಮುಕ್ತ ಆಡಳಿತ ನೀಡುವ ಬದಲಾಗಿ ಈಗ ‘ಪ್ರಭಾವಿ’ ಗಳ ಅಣತಿಯಂತೆ ಸ್ವಪಕ್ಷದವರ ಫೋನ್ ಟ್ಯಾಪಿಂಗ್ ಮಾಡುತ್ತಿರುವುದು ಹೇಯ ಹಾಗೂ ಖಂಡನೀಯ. ಕಾಂಗ್ರೆಸ್ ನಾಯಕರು ತಮ್ಮ ರಾಜಕೀಯ ಹೆಬ್ಬಯಕೆಗಳನ್ನು, ಖುರ್ಚಿ ಕುಸ್ತಿಯನ್ನು ಬದಿಗಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಯೋಚಿಸಲಿ ಎಂದಿದ್ದಾರೆ.