ಬಣ ಬಡಿದಾಟ ಮೈತ್ರಿ ಮೇಲೆ ಪರಿಣಾಮ ಬೀರಲ್ಲ

0
23

ಹುಬ್ಬಳ್ಳಿ: ಬಣ ಬಡಿದಾಟ ಬಿಜೆಪಿಯ ಆಂತರಿಕ ವಿಚಾರ. ಆ ಬಗ್ಗೆ ವರಿಷ್ಠರು ಗಮನ ಹರಿಸುತ್ತಾರೆ. ಆದರೆ, ಒಳ ಜಗಳ ಮೈತ್ರಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಭಾನುವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಪಕ್ಷ. ಆಂತರಿಕ ಬೇಗುದಿ ಏನೇ ಇದ್ದರೂ ಅವು ಪಕ್ಷದ ವೇದಿಕೆಯಲ್ಲಿ ಬಗೆ ಹರಿಯಲಿವೆ. ವರಿಷ್ಠರು ಎಲ್ಲವನ್ನೂ ಸರಿ ಪಡಿಸುತ್ತಾರೆ. ಆದರೂ, ನನ್ನ ಕೆಲ ಬಿಜೆಪಿ ಸ್ನೇಹಿತರಿಗೆ ಸುಧಾರಿಸಿಕೊಂಡು ಹೋಗುವಂತೆ ಸಲಹೆ ನೀಡಿದ್ದೇನೆ ಎಂದರು.
ದೆಹಲಿ ಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಯಿಸಿದ ಅವರು, ಕಳೆದ ಹತ್ತು ವರ್ಷದಲ್ಲಿ ಆಪ್ ಏನೂ ಅಭಿವೃದ್ಧಿ ಮಾಡಿಲ್ಲ. ಮೂಲಭೂತ ಸೌಕರ್ಯಗಳನ್ನು ನಿರ್ಲಕ್ಷಿಸಿದ್ದೇ ಅವರಿಗೆ ಮುಳುವಾಗಿದೆ. ದೆಹಲಿಯ ಅಭಿವೃದ್ಧಿ ದೃಷ್ಟಿಯಿಂದ ಜನತೆ ಸೂಕ್ತ ತೀರ್ಮಾನ ಕೈಗೊಂಡಿದ್ದಾರೆ ಎಂದರು.

Previous articleಗದುಗಿನಲ್ಲಿ ಮೀಟರ್ ಬಡ್ಡಿ ದಂಧೆಕೋರರಿಗೆ ಚಳಿ ಬಿಡಿಸಿದ ಪೊಲೀಸರು
Next articleಮಾಸ್ಟರ್ ಪ್ಲ್ಯಾನ್ ಮಾಡಿ ಆರೋಪಿಯನ್ನು ಕೆಳಗಿಳಿಸಿದ ಪೊಲೀಸರು