ಬಣ್ಣದಾಟವಾಡಿ ಕೆರೆಗೆ ಈಜಲು ಹೋಗಿದ್ದ ಯುವಕ ಸಾವು

0
32

ನರಗುಂದ: ಹೋಳಿ ಹಬ್ಬದಂದು ಸ್ನೇಹಿತರೊಂದಿಗೆ ಬಣ್ಣದಾಟವಾಡಿ ಸೋಮಾಪೂರ ಕೆರೆಯಲ್ಲಿ ಸ್ನಾನ ಮಾಡಲು ಹೋದ ಯುವಕ ಈಜು ಬರಲಾರದೇ ನೀರಲ್ಲಿ ಮುಳಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಾಜಪೇಯಿ ನಗರದ ಶಿವಾನಂದ ಭೀಮಪ್ಪ ಕೀಲಿಕೈ(೨೧) ಎಂಬಾತನೇ ಮೃತಪಟ್ಟಿದ್ದಾನೆ. ಶನಿವಾರ ಮಧ್ಯಾಹ್ನ ಕೆರೆಯಲ್ಲಿ ಈಜಲು ಹೋಗಿದ್ದ ಈತ ಈಜು ಬರಲಾರದೇ ನೀರಲ್ಲಿ ಮುಳುಗಿದ್ದ ಬಳಿಕ ಅಗ್ನಿಶಾಮಕ ದಳ ಮತ್ತು ಪೋಲಿಸರು ಕಾರ್ಯಾಚರಣೆ ಈತನಿಗಾಗಿ ಶೋಧ ನಡೆಸಿದ್ದರು. ಇಂದು ಮುಂಜಾನೆ ಈತನ ಶವ ಪತ್ತೆಯಾಗಿದೆ.

Previous articleಇಬ್ಬರು ಸಚಿವರ ಹೆಸರು ಸದನದಲ್ಲಿ ಹೇಳುವೆ
Next articleಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಲಮಾಣಿ ಶಿಫ್ಟ್