ಬಡ್ತಿ ನೀಡಿ ಹಾಸನಕ್ಕೆ ಎತ್ತಂಗಡಿ ಏಡುಕೊಂಡಲು ವರ್ಗಾವಣೆ

ಕೋಲಾರ: ಕೋಲಾರ ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ಅವರನ್ನು ರಾಜ್ಯ ಸರ್ಕಾರ ಮಂಗಳವಾರ ರಾತ್ರಿ ವರ್ಗಾವಣೆ ಮಾಡಿದೆ.
ಏಡುಕೊಂಡಲು ಅವರಿಗೆ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ನೀಡಿ ಹಾಸನ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇವರೊಂದಿಗೆ ರಾಜ್ಯದ ವಿವಿಧ ೨೦ ಐಎಫ್‌ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಕಳೆದ ಎರಡು ವರ್ಷದಿಂದ ಕೋಲಾರ ಜಿಲ್ಲೆಯಲ್ಲಿ ಸುಮಾರು ೨೦೦೦ ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿದ್ದ ಏಡುಕೊಂಡಲು ಕಳೆದ ಮೂರು ತಿಂಗಳಿನಿಂದ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಅವರಿಗೆ ಸೇರಿದ ಶ್ರೀನಿವಾಸಪುರ ತಾಲ್ಲೂಕು ಅಡ್ಡಗಲ್ ಸಮೀಪದ ಹೊಸಹುಡ್ಯದ ಜಿನಗಲಕುಂಟೆ ಅರಣ್ಯದ ಸ.ನಂ.೧ ಮತ್ತು ೨ರ ಭೂಮಿ ಒತ್ತುವರಿ ಆಗಿದೆ ಎಂಬ ವಿಚಾರದಲ್ಲಿ ಜಂಟಿ ಸರ್ವೆಗೆ ಆದೇಶಿಸುವ ಮೂಲಕ ಸುದ್ದಿಯಲ್ಲಿದ್ದರು.