ಬಜೆಟ್ ಮಂಡನೆಗಾಗಿ ಮಧುಬನಿ ಸೀರೆಯುಟ್ಟ ನಿರ್ಮಲಾ ಸೀತಾರಾಮನ್: ಸೀರೆಯ ವಿಶೇಷತೆಯೇನು?

0
28

2021ರ ಪದ್ಮ ಪ್ರಶಸ್ತಿ ಪುರಸ್ಕೃತ ದುಲಾರಿ ದೇವಿ ಅವರಿಗೆ ಗೌರವ ಸಲ್ಲಿಸಲು ಮಧುಬನಿ ಕಲೆಯ ಸೀರೆಯನ್ನು ನಿರ್ಮಲಾ ಸೀತಾರಾಮನ್ ಧರಿಸಿದ್ದಾರೆ.

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿಶೇಷ ಸೀರೆ ಧರಿಸಿದ್ದು, ಇದರ ಹಿಂದೆ ದೊಡ್ಡ ಕಥೆಯೇ ಇದೆ. ಅಂದಹಾಗೆ ನಿರ್ಮಲಾ ಅವರು ಇಂದು ಮಧುಬನಿ ಸೀರೆಯಲ್ಲಿ ಮಿಂಚಿದ್ದಾರೆ.
ಇಂದು ಬಜೆಟ್ ಮಂಡಿಸಲು ವಿಶೇಷವಾದ ಬಿಹಾರದ ಮಧುಬನಿ ಕಲೆಯ ಸೀರೆ ಧರಿಸಿ ಸಂಸತ್‌ಗೆ ಬಂದಿದ್ದು. ಇದನ್ನು ಪದ್ಮ ಪ್ರಶಸ್ತಿ ಪುರಸ್ಕೃತ ದುಲಾರಿ ದೇವಿ ಅವರ ಕೌಶಲ್ಯ ಹಾಗೂ ಬಿಹಾರದ ಮಧುಬನಿ ಕಲೆಯ ಗೌರವಾರ್ಥವಾಗಿ ಕೇಂದ್ರ ಸಚಿವೆ ಈ ಸೀರೆ ಧರಿಸಿದ್ದಾರೆ. 2021ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ದುಲಾರಿ ದೇವಿ ಅವರನ್ನು ನಿರ್ಮಲಾ ಸೀತಾರಾಮನ್‌ ಅವರು ಮಧುಬನಿಗೆ ಹೋಗಿದ್ದಾಗ ಭೇಟಿಯಾಗಿದ್ದರು. ದುಲಾರಿ ದೇವಿ ಅವರು 2021 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಮಿಥಿಲಾ ಕಲಾ ಸಂಸ್ಥಾನದಲ್ಲಿ ಕ್ರೆಡಿಟ್ ಔಟ್ರೀಚ್ ಕಾರ್ಯಕ್ರಮವೊಂದಕ್ಕಾಗಿ ಹಣಕಾಸು ಸಚಿವರು ಮಧುಬನಿಗೆ ಭೇಟಿ ನೀಡಿದ್ದಾಗ, ಅವರು ದುಲಾರಿ ದೇವಿ ಅವರನ್ನು ಭೇಟಿಯಾಗಿದ್ದರು. ಬಿಹಾರದಲ್ಲಿ ಮಧುಬನಿ ಕಲೆಯ ಕುರಿತು ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ದುಲಾರಿ ದೇವಿ ಅವರು ಹಣಕಾಸು ಸಚಿವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು ಮತ್ತು ಬಜೆಟ್ ದಿನದಂದು ಅದನ್ನು ಧರಿಸುವಂತೆ ಮನವಿ ಮಾಡಿದ್ದರು.

Previous articleಸರಣಿ ಅಪಘಾತ: ೩ ಸಾವು
Next articleಬಳ್ಳಾರಿಯಲ್ಲಿ ಮತ್ತೋರ್ವ ಬಾಣಂತಿ ಸಾವು