ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಜೂ.೭ ರಂದು ಬೆಳಗ್ಗೆ ೭ ಗಂಟೆಯಿಂದ ಮಧ್ಯಾಹ್ನ ೧೨ಗಂಟೆಯವರೆಗೆ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಹತ್ತಿರದ ಈದ್ಗಾ ಮೈದಾನ, ಹಳೇಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದ್ದಾರೆ.
ಗದಗ ಕಡೆಯಿಂದ ಮತ್ತು ರೈಲ್ವೆ ಸ್ಟೇಷನ್ ಕಡೆಯಿಂದ ಬರುವ ಬಸ್‌ಗಳನ್ನು ಪಿಂಟೋಸರ್ಕಲ್‌ನಲ್ಲಿ ನಿಲ್ಲಿಸಬೇಕು. ಅಲ್ಲಿಂದ ಮರಳಿ ಗದಗ ರೋಡ ಮೂಲಕ ಸಂಚರಿಸಬೇಕು. ಉಳಿದ ವಾಹನಗಳು ದೇಸಾಯಿ ಕ್ರಾಸ್ ಮೂಲಕ, ಕಾಟನ್ ಮಾರ್ಕೆಟ್ ಮೂಲಕ ಹೊಸೂರು ಕ್ರಾಸ್‌ಗೆ ಸೇರಬೇಕು. ದೂರ ಊರಿಗೆ ಹೋಗುವ ಬಸ್‌ಗಳನ್ನು ರಿಂಗ್ ರೋಡ್ ಬಳಸಿ, ಗಬ್ಬೂರ, ತಾರಿಹಾಳ ಬೈಪಾಸ್ ಮೂಲಕ ಗೋಕುಲ, ಹೊಸೂರು ಬಸ್ ನಿಲ್ದಾಣಕ್ಕೆ ಸೇರಬೇಕು.
ನವಲಗುಂದ ಕಡೆಯಿಂದ ಬರುವ ಬಸ್‌ಗಳು ಸರ್ವೋದಯ ಸರ್ಕಲ್‌ದಲ್ಲಿ ನಿಲ್ಲಿಸಿ ಮರಳಿ ನವಲಗುಂದಕ್ಕೆ ಹೋಗಬೇಕು. ಉಳಿದ ವಾಹನಗಳು ಪಿಂಟೋ ಸರ್ಕಲ್ ಕಡೆಯಿಂದ ಹೊಸೂರು ಕಡೆಗೆಹೋಗಬೇಕು. ನವಲಗುಂದ ಕಡೆಯಿಂದ ಬರುವ ದೂರ ಪ್ರಯಾಣದ ಬಸ್‌ಗಳು ಕೂಡ ರಿಂಗ್ ರೋಡ ಮೂಲಕ ಬೈಪಾಸ್ ಬಳಸಿ ಹೊಸ ಬಸ್ ನಿಲ್ದಾಣ ತಲುಪಬೇಕು.
ಕಾರವಾರ ರೋಡ್ ಕಡೆಯಿಂದ ಬರುವ ವಾಹನಗಳನ್ನು ಕಾರವಾರ ರೋಡ ಪ್ಲಾಜಾದಿಂದ ತಾರಿಹಾಳ ಮಾರ್ಗವಾಗಿ ಗೋಕುಲ ರೋಡ ಮೂಲಕ ಹೊಸೂರು ಸರ್ಕಲ್‌ಗೆ ಬಂದು ಸೇರಬೇಕು.
ಬೆಂಗಳೂರು ಹಾಗೂ ಗಬ್ಬೂರ ಕಡೆಯಿಂದ ಬರುವ ವಾಹನಗಳು ಬೈಪಾಸ್ ಮೂಲಕ ತಾರಿಹಾಳ ಬೈಪಾಸ್ಮೂಲಕ ಹೊಸ ಬಸ್ ನಿಲ್ದಾಣ, ಧಾರವಾಡಕ್ಕೆ ಹೋಗಬೇಕು. ಅಂದು ಬೆಂಗಳೂರು, ಕಲಘಟಗಿಕಡೆಯಿಂದ ಬರುವ ವಾಹನಗಳಿಗೆ ಇಂಡಿಪಂಪ್‌ಗೆ ಹೋಗುವುದನ್ನು ನಿಷೇಧಿಸಲಾಗದೆ. ಬೈಪಾಸ್ ಮೂಲಕ ಹೋಗಬೇಕು. ಇತರೆ ವಾಹನಗಳು ದೇಸಾಯಿ ಕ್ರಾಸ್, ಕಾಟನ್ ಮಾರ್ಕೇಟ್ ರಸ್ತೆ ಬಳಸಬೇಕು.
ತಾತ್ಕಲಿಕ ಬಸ್ ನಿಲ್ದಾಣ: ಗದಗ ರೋಡ ಅಂಡರ್ ಬ್ರಿಡ್ಜ್ ಹತ್ತಿರ, ಸರ್ವೋದಯ ಸರ್ಕಲ್ ಹತ್ತಿರ, ಗಬ್ಬೂರ ಸರ್ಕಲ್, ಹೊಸೂರು ಬಸ್ ನಿಲ್ದಾಣ, ಕಾರವಾರ ರೋಡ ಅಂಡರ್ ಬ್ರಿಡ್ಜ್, ಐ.ಟಿ.ಪಾರ್ಕ್ ಮುಂದೆತಾತ್ಕಲಿಕ ಬಸ್ ನಿಲ್ದಾಣ ಮಾಡಲಾಗಿದೆ.
ನೆಹರೂ ಮೈದಾನ, ಎಂ.ಟಿ.ಮಿಲ್ಲ ಗ್ರೌಂಡ್, ಹಳೇಹುಬ್ಬಳ್ಳಿ ಕೆಇಬಿ ಗ್ರೀಡ್ ಹತ್ತಿರತಾತ್ಕಲಿಕ ಪಾರ್ಕಿಂಗ್ ಮಾಡಲಾಗಿದೆ.