ಬಂಗಾರದ ಅಂಗಡಿಯಲ್ಲಿ ಕಳ್ಳತನ: ಅಪಾರ ಪ್ರಮಾಣದ ಆಭರಣ ದೋಚಿದ ಕಳ್ಳರು

0
22

ಹುಬ್ಬಳ್ಳಿ: ಕೇಶ್ವಾಪುರದ ಬಂಗಾರದ ಅಂಗಡಿಯಲ್ಲಿ ಕಳೆದ ರಾತ್ರಿ ಅಂಗಡಿ‌ ನುಗ್ಗಿದ ಕಳ್ಳರು ಅಪಾರ ಪ್ರಮಾಣದ ಬಂಗಾರ ದೋಚಿ ಪರಾರಿಯಾಗಿದ್ದಾರೆ.
ಗ್ಯಾಸ್ ಕಟರ್‌ನಿಂದ ಕೀಲಿ ಮುರಿದ ಕಳ್ಳರು ಜ್ಯುವೆಲರಿ ಅಂಗಡಿಗೆ ನುಗ್ಗಿ ಸುಮಾರು 800 ಗ್ರಾಂ ಚಿನ್ನ 50 ಕೆಜಿ ಬೆಳ್ಳಿ ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ನಗರದ ರಮೇಶ ಭವನ ಬಳಿ ಇರುವ ಜಗದೀಶ ದೈವಜ್ಞ ಎಂಬುವರಿಗೆ ಸೇರಿದ ಭುವನೇಶ್ವರಿ ಜ್ಯುವೆಲರಿಗೆ ನುಗ್ಗಿದ ಚಾಲಾಕಿ ಕಳ್ಳರು ಸಿಸಿ ಕ್ಯಾಮಾರಕ್ಕೆ ಸ್ಪ್ರೇ ಮಾಡಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೋಲೀಸ ಆಯುಕ್ತ ಎನ್ ಶಶಿಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಲ್ಲದೇ ಕಳ್ಳರ ಪತ್ತೆಗಾಗಿ ತಂಡ ರಚನೆ ಮಾಡಿದ್ದಾರೆ.

Previous articleಕೆಮ್ಲಿನ್ ಕಂಪಾಸ್‌ ಬಾಕ್ಸ್ ಸಂಸ್ಥಾಪಕ ಸುಭಾಷ್ ದಾಂಡೇಕರ್ ನಿಧನ
Next article‘ಮ್ಯಾಕ್ಸ್‘ ಟೀಸರ್‌ನಲ್ಲಿ ‘ಬಾ ಬಾ ಬ್ಲಾಕ್ ಶೀಪ್’