ಫ್ಲೈಓವರ್ ಕಾಮಗಾರಿ: ಕಬ್ಬಿಣದ ರಾಡ್ ಬಿದ್ದು ಎಎಸ್‌ಐಗೆ ಗಂಭೀರ ಗಾಯ

0
12

ಹುಬ್ಬಳ್ಳಿ: ನಗರದ ಹಳೇ ಕೋರ್ಟ್ ಸರ್ಕಲ್‌ನಲ್ಲಿ ನಡೆಯುತ್ತಿರುವ ಫ್ಲೈಓವರ್ ಕಾಮಗಾರಿ ಸ್ಥಳದಲ್ಲಿ ಕಬ್ಬಿಣದ ರಾಡ್ ಮೇಲಿಂದ ಬಿದ್ದು ಉಪನಗರ ಪೊಲೀಸ್ ಠಾಣೆಯ ಎಎಸ್‌ಐ ನಾಬಿರಾಜ್ ದಾಯಣ್ಣವರ ಎಂಬುವರು ತೀವ್ರ ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಹಳೇ ಕೋರ್ಟ್ ಸರ್ಕಲ್ ಹತ್ತಿರ ಎಎಸ್‌ಐ ನಂಬಿರಾಜ್ ಅವರು ಕರ್ತವ್ಯದ ಮೇಲಿದ್ದರು. ಈ ವೇಳೆ ಫ್ಲೈಓವರ್ ಮೇಲಿಂದ ಅವರ ತಲೆಯ ಮೇಲೆ ರಾಡ್ ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ದಾಯಣ್ಣವರ ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಸದ್ಯ ದಾಯಣ್ಣವರ ಅವರ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳಕ್ಕೆ ಪಿಐ ಹೂಗಾರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಳೆದ ಒಂದು ವರ್ಷದಿಂದ ಉಪನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Previous articleಎನ್‌ಎಸ್‌ಯುಐ ‘ಕ್ಯಾಂಪಸ್ ಗೇಟ್ ಮೀಟ್’ ಅಭಿಯಾನ
Next articleಸಾಕು ನಾಯಿ ಕಸ ವಿಲೇ ವಾಹನಕ್ಕೆ : ಪ್ರಾಣಿ ಪ್ರಿಯರ ಆಕ್ರೋಶ..!