ಫ್ಯಾನ್ ದುರಸ್ತಿ ಮಾಡುತ್ತಿದ್ದಾಗ ಕರೆಂಟ್ ಪ್ರವಹಿಸಿ ಸಾವು

0
20


ಮಂಗಳೂರು: ಫ್ಯಾನ್ ದುರಸ್ತೊ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಬಂಟ್ವಾಳ ಸಜೀಪದಲ್ಲಿ ಫೆ.೭ರಂದು ನಡೆದಿದೆ.
ಅರಳ ನಿವಾಸಿ ಭವಾನಿಶಂಕರ ಯಾನೆ ರಾಜೇಶ್ ಮೃತಪಟ್ಟ ವ್ಯಕ್ತಿ. ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ಈ ಘಟನೆ ನಡೆದಿದೆ.
ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ರಾಜೇಶ್‌ನ ತಂಗಿ ಮನೆಯಲ್ಲಿ ಪ್ಯಾನ್ ದುರಸ್ತಿ ಮಾಡುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Previous articleನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್: ಟಿಕೆಟ್ ಬೆಲೆ ಏರಿಕೆ
Next articleದನಗಳ್ಳರ ಮೇಲೆ ಗುಂಡಿಕ್ಕಿದರೆ ಗೋ ವಧೆ ನಿಲ್ಲಲಿದೆ