ಫೆ.25ರಂದು ಯಕ್ಷಗಾನ ಅಂಚೆಚೀಟಿ ಬಿಡುಗಡೆ

0
15

ಮಂಗಳೂರು: ನಗರದ ಎಂಆರ್‌ಪಿಎಲ್ ಸಹಯೋಗದಲ್ಲಿ ಫೆ.25ರಂದು ಯಕ್ಷಗಾನ ಅಂಚೆಚೀಟಿ ಬಿಡುಗಡೆಯಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ನಾಡಿನ ಹೆಮ್ಮೆಯ ಗಂಡುಕಲೆ ಯಕ್ಷಗಾನಕ್ಕೆ ಗೌರವ ಸಲ್ಲಿಸುವ ಸಲುವಾಗಿ ಫೆಬ್ರವರಿ 25ರಂದು(ನಾಳೆ) ಮಂಗಳೂರಿನ ಪುರಭವನದಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಯಕ್ಷಗಾನ ಕಲೆಯ ಅಂಚೆಚೀಟಿ ಬಿಡುಗಡೆಗೊಳ್ಳಲಿದ್ದು ಎಲ್ಲ ಯಕ್ಷಗಾನ ಕಲಾಪ್ರೇಮಿಗಳು ಬಂದು ಭಾಗವಹಿಸಿ. ಭಾರತೀಯ ಅಂಚೆ ಇಲಾಖೆಯ ಇತಿಹಾಸದಲ್ಲೇ ಇದೊಂದು ವಿಶೇಷ ದಿನವಾಗಲಿದೆ ಎಂದಿದ್ದಾರೆ.

Previous articleಕತ್ತಲು ಬೆಳಕಿನ ಗೆರೆಗಳ ನಡುವೆ
Next articleಸಂವಿಧಾನದ ವಿರುದ್ಧ ಇರುವವರನ್ನು ಕಿತ್ತು ಎಸೆಯಬೇಕು