ಫೆ.೨೮ ರಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್-೩

0
14

ಹುಬ್ಬಳ್ಳಿ: ಎನ್ ಒನ್ ಕ್ರಿಕೆಟ್ ಅಕಾಡೆಮಿಯಿಂದ ಫೆಬ್ರವರಿ ೨೮,೨೯ ಹಾಗೂ ಮಾರ್ಚ್ ೧,೨ ಹಾಗೂ ೩ ರಂದು ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಹೊನಲು ಬೆಳಕಿನ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್-೩(ಟಿಪಿಎಲ್-೩) ಕ್ರಿಕೆಟ್ ಪಂದ್ಯಾವಳಿ ನಡೆಯಲಿವೆ ಎಂದು ಟಿಪಿಎಲ್‌ನ ಬ್ರಾö್ಯಂಡ್ ಅಂಬಾಸಿಡರ್, ನಟಿ ರಾಗಿಣಿ ದ್ವಿವೇದಿ ಹಾಗೂ ಎನ್ ಒನ್ ಕ್ರಿಕೆಟ್ ಅಕಾಡೆಮಿಯ ಬಿ.ಆರ್. ಸುನಿಲ್‌ಕುಮಾರ್ ಹೇಳಿದರು.

ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಮೂರನೇ ಸೀಸನ್ ಆಗಿದೆ. ಟೆಲಿವಿಷನ್ ಮತ್ತು ಸಿನಿಮಾ ಕಲಾವಿದರು ಸೇರಿ ಮೀಡಿಯಾದವರು ಕ್ರಿಕೆಟ್ ಆಡಲಿದ್ದಾರೆ. ಒಟ್ಟು ೧೭೦ ಕ್ಕೂ ಹೆಚ್ಚು ನಟರು ಭಾಗವಹಿಸಲಿದ್ದಾರೆ ಎಂದರು.

ನಾಯಕನಟರಾದ ಲೂಸ್ ಮಾದ, ರವಿಶಂಕರ್, ವಿಹಾನ್, ಚೇತನಸೂರ್ಯ, ಅಲ್ಕನಂದಾ ಅವರು ಮಾತನಾಡಿ, ಉತ್ತರ ಕರ್ನಾಟಕ ಭಾಗದ ಜನರು ಅನೇಕ ಕಲಾವಿದರನ್ನು ಬೆಳೆಸಿದ ಕೀರ್ತಿ ಹೊಂದಿದೆ. ಹುಬ್ಬಳ್ಳಿಗೂ ಕಲಾವಿದರಿಗೂ ಸಾಕಷ್ಟು ನಂಟಿದೆ. ಹೀಗಾಗಿ ಈ ಭಾಗದಲ್ಲಿ ಕ್ರಿಕೆಟ್ ಪಂದ್ಯ ಹಮ್ಮಿಕೊಂಡಿದ್ದು, ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ನಟಿಯರಾದ ವರ್ಷಿತಾ, ರಾಶಿಕಾ ಶೆಟ್ಟಿ, ಕುಶಾಲಗೌಡ, ಅಭಿಷೇಕ, ಅಭಿಲಾಷ್ ಇತರರಿದ್ದರು.

Previous articleಸರಳ ಸುಂದರ ಪ್ರೇಮ್ ಕಹಾನಿ
Next articleಜಸ್ಟ್‌ಪಾಸ್ ಆದವರ ಫಸ್ಟ್‌ಕ್ಲಾಸ್ ಚಿತ್ರ