ಫಲಿತಾಂಶಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

0
14
ಸಾವು

ಕುಷ್ಟಗಿ: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಅಂಕಗಳು ಕಡಿಮೆ ಬಂದಿದೆ ಎಂದು ವಿದ್ಯಾರ್ಥಿನಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಯಲಬುರ್ತಿ ಗ್ರಾಮದ ವಿಜಯಲಕ್ಷ್ಮಿ ಹೊನ್ನನಗೌಡ ಮಾಲಿಪಾಟೀಲ ಎಂಬ ವಿದ್ಯಾರ್ಥಿನಿಯೇ ಆತ್ಮಹತ್ಯೆಗೆ ಶರಣಾಗಿದ್ದು, ಕುಷ್ಟಗಿ ಬಾಲಕಿಯರ ಸ.ಪ.ಪೂ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದು ತಾನು ಅಂದುಕೊಂಡಿರುವಷ್ಟು ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ. 75ಕ್ಕಿಂತ ಹೆಚ್ಚು ಬರಬೇಕೆಂದು ನಿರೀಕ್ಷೆ ಇಟ್ಟುಕೊಂಡಿದ್ದಳು. ಆದರೆ ಕೇವಲ ಶೇ. 59ರಷ್ಟು ಅಂಕ ಬಂದಿರುವುದರಿಂದ ವಿಜಯಲಕ್ಷ್ಮಿ ಏಪ್ರಿಲ್ 11ರಂದು ಕ್ರಿಮಿನಾಶಕ ಸೇವಿಸಿದ್ದಾಳೆ. ಕೂಡಲೇ ಗಮನಿಸಿದ ಪಾಲಕರು ಆಕೆಯನ್ನು ಆಸ್ಪತ್ರಗೆ ಸೇರಿಸಿದರಾದರೂ ಆಕೆ ಚಿಕಿತ್ಸೆ ಫಲಿಸದೇ ೧೮ರಂದು ರಾತ್ರಿ ಮೃತಪಟ್ಟಿದ್ದಾಳೆ. ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleನೇಹಾ ಕೊಲೆ ಪ್ರಕರಣ: ಫಯಾಜ್ ಮನೆಗೆ ಪೊಲೀಸ್ ಭದ್ರತೆ
Next articleವಿದ್ಯುತ್ ಕಂಬದ ದುರಸ್ತಿ ವೇಳೆ ಅವಘಡ