ಫಲಾನುಭವಿಗಳಿಗೆ ಸಿಗದ ಹಣ, ಸಮಿತಿಯ ಸದಸ್ಯರಿಗೆ

0
13

ಮುಖಂಡರನ್ನು ಓಲೈಸಲು ಸಮಿತಿಯ ಸದಸ್ಯರಿಗೆ ವೇತನ

ಬೆಂಗಳೂರು: ಮುಖಂಡರನ್ನು ಓಲೈಸಲು ಗ್ಯಾರಂಟಿ ಸಮಿತಿಯ ಸದಸ್ಯರಿಗೆ ವೇತನ ನೀಡಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಇನ್ನೇನು ತಾಲೂಕು ಪಂಚಾಯ್ತಿ/ಜಿಲ್ಲಾ ಪಂಚಾಯ್ತಿ, ಬಿಬಿ ಎಂಪಿ ಚುನಾವಣೆ ಸಮೀಪಿಸುತ್ತಿದಂತೆ ಕಾರ್ಯಕರ್ತರನ್ನು, ಮುಖಂಡರನ್ನು ಓಲೈಸಲು ಕಾಂಗ್ರೆಸ್ ಪಕ್ಷ ತಮ್ಮ ಗ್ಯಾರಂಟಿ ಸಮಿತಿಯ ಸದಸ್ಯರಿಗೆ ವೇತನ ನೀಡಿದೆ. ಆದರೆ ಫಲಾನುಭವಿಗಳಿಗೆ 3-4 ತಿಂಗಳಿನಿಂದ ಹಣ ನೀಡಿಲ್ಲ.

ಬಾಕಿ ಇರುವ ಗ್ಯಾರಂಟಿ ಹಣವನ್ನು ಚುನಾವಣಾ ಪೂರ್ವದಲ್ಲಿ, ಹಬ್ಬ ಹರಿದಿನಗಳ ಸಮಯದಲ್ಲಿ ಕೊಟ್ಟು ಅವರನ್ನು ಭಾವನಾತ್ಮಕವಾಗಿ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಫಲಾನುಭವಿಗಳಿಗೆ ಸಿಗದ ಹಣ, ಸಮಿತಿಯ ಸದಸ್ಯರಿಗೆ ಸಿಕ್ಕಿದೆ.

ಮುಖ್ಯ ಮಂತ್ರಿಗಳ ‘ಆರ್ಥಿಕ ಶಿಸ್ತು’ ಬರಿ ಭಾಷಣಕ್ಕೆ ಸೀಮಿತವಾಗಿದೆ. ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಸಮಿತಿಗಳಿಗೆ ಗೌರವ ಸಂಭಾವನೆ, ಭತ್ಯೆ, ಸಿಬ್ಬಂದಿ ವೆಚ್ಚ ಸೇರಿ ಒಟ್ಟು ವರ್ಷಕ್ಕೆ 16 ಕೋಟಿ ವೆಚ್ಚವಾಗುತ್ತದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕಾಗಿದ್ದ ಸರ್ಕಾರ ಈ ರೀತಿ ಓಲೈಕೆ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.

Previous articleಬ್ಯಾಟಿಂಗ್ ಮಾಂತ್ರಿಕನ 300ನೇ ಏಕದಿನ ಪಂದ್ಯ
Next article‘ಉಡುಗೊರೆ’ ಕೊಟ್ಟು ಬೊಕ್ಕಸ ಲೂಟಿ