ಚಿಕ್ಕಮಗಳೂರು: ಇಲ್ಲಿನ ವಿಜಯಪುರ ಬಡಾವಣೆಯಲ್ಲಿ ಬಿಡಾಡಿ ಹಸು ಪ್ಲಾಸ್ಟಿಕ್ ಸೇವಿಸಿ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡಿದರೂ ಪ್ರಯೋಜನವಾಗದೇ ಸಾವನ್ನಪ್ಪಿದೆ.
ಈ ವೇಳೆ ಗೋಸಂರಕ್ಷಕರು ರಾಮನಹಳ್ಳಿ ಸ್ಮಶಾನದಲ್ಲಿ ಪಶು ವೈದ್ಯರ ಸಮ್ಮುಖದಲ್ಲಿ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿ, ಹೊಟ್ಟೆಯಲ್ಲಿದ್ದ ಸುಮಾರು 80 ಕೆಜಿಗೂ ಹೆಚ್ಚು ಪ್ಲಾಸ್ಟಿಕ್ ಹೊರ ತೆಗೆದು ಅಂತ್ಯಕ್ರಿಯೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಆಂಬುಲೆನ್ಸ್ ಟ್ರಸ್ಟ್ ಪುನೀತ್, ಸಂತೋಷ್ ಕೋಟ್ಯಾನ್, ಮಂಜುನಾಥ್ ಗಂಟೆ, ನಿಖಿಲ್, ವಿಶ್ವನಾಥ್, ಗೌತಮ್, ಬಜರಂಗದಳದ ಪ್ರಮುಖರಾದ ಶಾಮ್ ವಿ. ಗೌಡ, ಆಕಾಶ್, ಸಮಿತ್, ಪಶು ವೈದ್ಯಾಧಿಕಾರಿ ಡಾ.ರಾಮ ಚಂದ್ರಗೌಡ, ಸ್ಥಳೀಯರು ಇದ್ದರು.