ಸೂಟ್‌ಕೇಸ್‌ನಲ್ಲಿ ಹುಡುಗರ ಹಾಸ್ಟೆಲ್‌ಗೆ ಬಂದ ಪ್ರಿಯತಮೆ..
ಚಂಡಿಗಢ: ವಿದ್ಯಾರ್ಥಿ ತನ್ನ ಪ್ರಿಯತಮೆಯನ್ನು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಹುಡುಗರ ಹಾಸ್ಟೆಲ್‌ಗೆ ಬರುವಾಗ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಹರ್ಯಾಣದ ಓಪಿ ಜಿಂದಾಲ್ಯೂನಿವರ್ಸಿಟಿಯಲ್ಲಿ ಈ ಘಟನೆ ನಡೆದಿದ್ದು, ಯುವತಿಯನ್ನು ಸೂಟ್‌ಕೇಸ್‌ನಲ್ಲಿ ಕುರಿಸಿಕೊಂಡು ಹುಡುಗರ ಹಾಸ್ಟೆಲ್‌ಗೆ ಕರೆತರುವಾಗ ಹಾಸ್ಟೆಲ್ ಪ್ರವೇಶಿಸುತ್ತಲೇ ಸೂಟ್ ಕೇಸ್ ನೋಡಿದ ಭದ್ರತಾ ಸಿಬ್ಬಂದಿಗೆ ಅನುಮಾನ ಕಾಡಿದೆ. ಸೆಕ್ಯುರಿಟಿ ಗಾರ್ಡ್ ಸೂಟ್ ಕೇಸ್ ಓಪನ್ ಮಾಡಲು ಹೇಳಿದ್ದು. ಆರಂಭದಲ್ಲಿ ಆತ ಒಪ್ಪಿಲ್ಲವಾದರೂ ಬಳಿಕ ಅಲ್ಲಿದ್ದ ಸಿಬ್ಬಂದಿ ಸೂಟ್ ಕೇಸ್ ತೆರೆಯಲು ಪ್ರಯತ್ನಿಸಿದ್ದಾರೆ. ಬಳಿಕ ಸೂಟ್ ಕೇಸ್ ನಲ್ಲಿದ್ದ ಯುವತಿ ಹೊರ ಬರುತ್ತಲೇ ಸಿಬ್ಬಂದಿ ಹೌಹಾರಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.