ಪ್ರೇಮ ವೈಫಲ್ಯ ಹಿನ್ನೆಲೆ ಯುವಕ ಆತ್ಮಹತ್ಯೆಗೆ ಯತ್ನ

0
31

ಹಾವೇರಿ: ಪ್ರೀತಿ-ಪ್ರೇಮದ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿಗ್ಗಾವಿ ತಾಲೂಕಿನ ತಡಸದ ಸಮೀಪದ ತಾಯಮ್ಮ ದೇವಸ್ಥಾನ ಹತ್ತಿರ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದ ಪ್ರವೀಣ್ ಭರಮಪ್ಪ ಬೆಟದೂರು(25) ಆತ್ಮಹತ್ಯೆಗೆ ಯತ್ನಿಸಿದ ಯುವಕ.

ಉಡುಪಿಯಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ಪ್ರವೀಣ ಎರಡೂ ದಿನಗಳ ಹಿಂದಷ್ಟೇ ಬೆಳಗಲಿ ಗ್ರಾಮಕ್ಕೆ ಬರುವುದಾಗಿ ಮನೆಯಲ್ಲಿ ತಿಳಿಸಿದ್ದ. ಆದರೆ ತಡಸದ ತಾಯಮ್ಮ ದೇವಸ್ಥಾನ ಹತ್ತಿರ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಘಟನೆಯಲ್ಲಿ ಗಂಭೀರವಾಗಿ ಸುಟ್ಟು ಗಾಯಗೊಂಡಿರುವ‌ ಪ್ರವೀಣ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ. ಕೂಡಲೇ ಸ್ಥಳೀಯ ಪೊಲೀಸರು ಗಾಯಾಳು ಪ್ರವೀಣನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಶೀರೂರು ಮಠದ ಬಾಳೆ ಮುಹೂರ್ತ ಸಂಪನ್ನ
Next article’ಪಿಎಂಎವೈ-ಯು’ ಯೋಜನೆ ಅನುಷ್ಟಾನಕ್ಕೆ ಇನ್ನೂ ಒಪ್ಪಂದ ಮಾಡಿಕೊಳ್ಳದ ಸಿದ್ದರಾಮಯ್ಯ ಸರ್ಕಾರ