ಪ್ರೇಮವೈಫಲ್ಯ: ಯುವತಿ ಆತ್ಮಹತ್ಯೆ

0
31
ಆತ್ಮಹತ್ಯೆ

ಬೆಳಗಾವಿ: ಎಂಬಿಎ ಪದವಿ ಪಡೆದು ಕಂಪನಿಯೊಂದರಲ್ಲಿ ತರಬೇತಿ ಪಡೆಯುತ್ತಿದ್ದ ಯುವತಿಯೊಬ್ಬಳು ಪಿಜಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಐಶ್ವರ್ಯ ಆತ್ಮಹತ್ಯೆಗೆ ಶರಣಗಿರುವ ಯುವತಿ. ವಿಜಯಪುರ ಮೂಲದ ಯುವತಿ ಎಂಬಿಎ ಬಳಿಕ ಕೆಲಸಕ್ಕಾಗಿ ಬೆಳಗಾವಿಗೆ ಬಂದು ನೆಹರು ನಗರದ ಪಿಜಿಯಲ್ಲಿ ವಾಸವಾಗಿದ್ದಳು. ಮೂರು ತಿಂಗಳಿಂದ ಕಂಪನಿಯೊಂದರಲ್ಲಿ ತರಬೇತಿ ಪಡೆಯುತ್ತಿದ್ದಳು. ಏಕಾಏಕಿ ಹಾಸ್ಟೆಲ್ ರೂಂ ನಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೂ ಮುನ್ನ ಯುವತಿ ತನ್ನ ಸ್ನೇಹಿತೆ ಜೊತೆ ಮಾತನಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಷ್ಟು ಹೊತ್ತಾದರೂ ಪಿಜಿ ರೂಂ ಬಾಗಿಲು ತೆರೆಯದಿದ್ದಾಗ ಬಾಗಿಲು ಮುರಿದು ಪರಿಶೀಲಿಸಿದಾಗ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಹಿಮಾಲಯದಿಂದ ರಾಜಕೀಯದವರೆಗಿನ ಪಯಣ: ಯೋಗಿ ಆದಿತ್ಯನಾಥ್ ಬಯೋಪಿಕ್
Next articleನಕಲಿ ಅಂಕಪಟ್ಟಿ ಜಾಲ: ಮೂವರು ವಶಕ್ಕೆ