ಪ್ರೀತಿಯ ಶ್ವಾನಕ್ಕಾಗಿ ಮಾತು ತಪ್ಪಿದ್ದ ಟಾಟಾ

0
15

ಸೇವಾ ಕ್ಷೇತ್ರದಲ್ಲಿ ಮಾಡಿದ ಅಮೋಘ ಕೆಲಸ ಮೆಚ್ಚಿ ಬ್ರಿಟಿಷ್ ರಾಜ ಚಾಲ್ಸ್ ೨೦೧೮ರಲ್ಲಿ ರತನ್ ಟಾಟಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಕೊಡಲು ನಿರ್ಧಾರ ಮಾಡಿದ್ದರು. ಕಾರ್ಯಕ್ರಮಕ್ಕೆ ಬರುವುದಾಗಿ ಟಾಟಾ ಕೂಡ ಒಪ್ಪಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ರತನ್ ಟಾಟಾ ಬ್ರಿಟಿಷ್ ರಾಜನ ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲ. ಅದೇ ಸಮಯದಲ್ಲಿ ಅವರ ಪ್ರೀತಿಯ ಶ್ವಾನ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ನರಳುವಂತಾಗಿತ್ತು. ಹಾಗಾಗಿ `ನನಗೆ ಬರಲು ಆಗುವುದಿಲ್ಲ’ ಎಂಬ ಸಂದೇಶವನ್ನು ಟಾಟಾ ಬ್ರಿಟನ್ ರಾಜನಿಗೆ ರವಾನಿಸಿದ್ದರು. ಇದನ್ನು ಕೇಳಿದ ಪ್ರಿನ್ಸ್ ಚಾಲ್ಸ್ ಟಾಟಾರ ವ್ಯಕ್ತಿತ್ವವನ್ನು ಮೆಚ್ಚಿ ಕೊಂಡಾಡಿದ್ದರು.

Previous articleಜನರಿಗೋಸ್ಕರ ಶುರುವಾದ ನ್ಯಾನೋ
Next articleಮೆಕ್ಯಾನಿಕ್‌ಗೆ ಒಲಿದ ೨೫ ಕೋಟಿ ಲಾಟರಿ