ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾವಣೆ ಮಾಡಬೇಕು
ಮಂಡ್ಯ: ವಿಸಿ ನಾಲೆಗೆ ಕಾರು ಪಲ್ಟಿಯಾಗಿ ಮೂವರು ಮೃತ ಪಟ್ಟ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡಿಸಲು ಸಿಎಂ ಬಳಿ ಮಾತನಾಡಿ ಪ್ರಯತ್ನ ಮಾಡುತ್ತೇನೆ ಎಂದು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.
ಇಂದು ಕುಟುಂಬ ಸಮೇತ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳೊಡನೆ ಮಾತಾನಾಡಿ ವಿಸಿ ನಾಲೆಗೆ ಕಾರು ಪಲ್ಟಿಯಾಗಿ ಮೂವರು ಮೃತ ಪಟ್ಟ ಕುಟುಂಬಕ್ಕೆ ಶಾಸಕ ಗಣಿಗ ರವಿ ವೈಯಕ್ತಿಕವಾಗಿ ಪರಿಹಾರ ನೀಡಿದ್ದಾರೆ.
ಯುವಕರು ಸ್ವಲ್ಪ ಎಚ್ಚರಿಕೆಯಿಂದ ಪ್ರವಾಸ ಮಾಡಬೇಕು ಎಂದು ಸಲಹೆ ನೀಡಲು ಬಯಸುತ್ತೇನೆ, ಚೆನ್ನಾಗಿರುವ ರಸ್ತೆಗಳಲ್ಲೂ ಆಕ್ಸಿಡೆಂಟ್ ಆಗುತ್ತಿವೆ. ಹೀಗಾಗಿ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾವಣೆ ಮಾಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡುವೆ. ಆದರೆ ಪ್ರಾಣ ಹಾನಿಯಾದಾಗ ಎಷ್ಟೇ ಪರಿಹಾರ ಕೊಟ್ಟರು ಸಹ ಆ ಕುಟುಂಬಕ್ಕೆ ನೆಮ್ಮದಿ ಸಿಗಲು ಸಾಧ್ಯವಿಲ್ಲ. ಯುವಕರೆಲ್ಲರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಇನ್ನು ವಿಸಿ ನಾಲೆಗೆ ತಡೆಗೋಡೆಗಳನ್ನು ನಿರ್ಮಿಸುವ ಕೆಲಸ ಗುತ್ತಿಗೆದಾರನಿಂದ ತಡವಾಗುತ್ತಿದೆ, ಈಗಾಗಲೇ ಎಸ್ಟಿಮೆಂಟ್ ಸಿದ್ದವಾಗಿದ್ದು. ಆ ಜಾಗದಲ್ಲಿ ರಸ್ತೆ ಹಾಗೂ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ. ತಕ್ಷಣ ಕೆಲಸ ಶುರು ಮಾಡುವಂತೆ ಹೇಳುತ್ತೇವೆ ಎಂದರು.