ಕುಂದಗೋಳ: ತಾಲೂಕಿನಲ್ಲಿ ಗುರುವಾರದಂದು ಸುರಿದ ಬಾರಿ ಮಳೆಯಿಂದ ಬೆಣ್ಣೆ ಹಳ್ಳ ತುಂಬಿ ಪ್ರವಾಹ ಹೆಚ್ಚಾಗಿ ದೇವನೂರ ಗ್ರಾಮದ ಬಳಿ ಸಿಲುಕಿಕೊಂಡಿದ್ದು, 150 ಕುರಿ, ಮೂವರು ಕುರಿಗಾಹಿಗಳನ್ನು ರಕ್ಷಿಸುವಲ್ಲಿ ಪಟ್ಟಣದ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಕುರಿ ಮೇಯಿಸಲು ತೆರಳಿದ್ದ ವೇಳೆ ಈ ಘಟನೆ ಜರುಗಿದ್ದು, ಈ ವೇಳೆ ಯಲ್ಲಪ್ಪ ಬೆನಕನಹಳ್ಳಿ ಎಂಬುವವರು ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿ ರಕ್ಷಣೆ ಮಾಡಿದ್ದಾರೆ. ರಭಸದಿಂದ ಹರಿಯುತ್ತಿದ್ದ ನೀರಿನ ಮಧ್ಯ ಸಿಲುಕಿ ಹಾಕಿಕೊಂಡಿದ್ದ ಯಲ್ಲಪ್ಪ ಸಿದ್ದಪ್ಪ ಬೆನಕನಹಳ್ಳಿ ಎನ್ನುವವರ 150 ಕುರಿಗಳು ಹಾಗೂ ಕುರಿಗಾಹಿಗಳಾದ ಮಂಜಪ್ಪ ಬೆನಕನಹಳ್ಳಿ, ಹನುಮಂತ ಬೆನಕನಹಳ್ಳಿ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಸಹ ಪ್ರವಾಹದ ಅಪಾಯದಿಂದ ಪಾರು ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅಗ್ನಿಶಾಮಕ ಅಧಿಕಾರಿ, ಆರ್ ಎಮ್ ಬೇಪಾರಿ, ಅಲ್ಲಾಬಕ್ಷ, ಶಂಕರ, ರಾಜು, ವಿಜಯ, ಸತೀಶ, ಮಂಜುನಾಥ, ಹೊನ್ನಪ್ಪ ಸೇರಿದಂತೆ ಅನೇಕರಿದ್ದರು.