ಪ್ರಬುದ್ಧ ಮತದಾರರನ್ನು ಭ್ರಷ್ಟಗೊಳಿಸುವ ಕುತಂತ್ರ

0
6

ಬೆಂಗಳೂರು: ಪದವೀಧರರ ಕ್ಷೇತ್ರದ ಪ್ರಬುದ್ಧ ಮತದಾರರನ್ನು ಭ್ರಷ್ಟಗೊಳಿಸುವ ಕುತಂತ್ರ ಅನುಸರಿಸಲು ಉಡುಗೊರೆಗಳನ್ನು ಹಂಚಲು ಸಿದ್ಧತೆ ನಡೆಸಿರುವುದನ್ನು ಕಣ್ಣಾರೆ ಕಾಣಬಹುದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಮಾಗದಿಂದ ದುರ್ಬಲಗೊಳಿಸಿ ಅಧಿಕಾರ ಕಬಳಿಸುವುದನ್ನೇ ಸ್ವಾತಂತ್ರ್ಯಾನಂತರದಿಂದಲೂ ಕರಗತ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಯಾರೊಬ್ಬರ ಭಾಗ್ಯದ ಬಾಗಿಲನ್ನೂ ತೆರೆಯಲು ಶಕ್ತವಲ್ಲದ ಆಕರ್ಷಣೆಯ ಯೋಜನೆಗಳಿಗಾಗಿ ರಾಜ್ಯದ ಬೊಕ್ಕಸ ಬರಿದು ಮಾಡಿಕೊಂಡಿದ್ದು, ಇದೀಗ ಪದವೀಧರರ ಕ್ಷೇತ್ರದ ಪ್ರಬುದ್ಧ ಮತದಾರರನ್ನು ಭ್ರಷ್ಟಗೊಳಿಸುವ ಕುತಂತ್ರ ಅನುಸರಿಸಲು ಉಡುಗೊರೆಗಳನ್ನು ಹಂಚಲು ಸಿದ್ಧತೆ ನಡೆಸಿರುವುದನ್ನು ಕಣ್ಣಾರೆ ಕಾಣಬಹುದಾಗಿದೆ.

ಸಾರ್ವತ್ರಿಕ ಚುನಾವಣೆಗಳಲ್ಲಿ ಬಡವರು, ಮುಗ್ಧ ಮತದಾರರನ್ನು ಕ್ಷಣಿಕ ಆಮಿಷಗಳ ಮೂಲಕ ದಿಕ್ಕು ತಪ್ಪಿಸಿ, ಪಾರದರ್ಶಕ ಚುನಾವಣಾ ವ್ಯವಸ್ಥೆಯನ್ನು ಮಲಿನಗೊಳಿಸುವ ಕಾಂಗ್ರೆಸ್ ಇದೀಗ ವಿದ್ಯಾವಂತ ಮತದಾರರ ಕ್ಷೇತ್ರವನ್ನೂ ಕಲುಷಿತಗೊಳಿಸಲು ಹೊರಟಿರುವುದು ನಾಚಿಗೆಗೇಡಿನ ಸಂಗತಿಯಾಗಿದೆ.

ಚುನಾವಣಾ ಆಯೋಗ, ಪೊಲೀಸ್ ಹಾಗೂ ತೆರಿಗೆ ಇಲಾಖೆಗಳು ಅಭ್ಯರ್ಥಿ ರಾಮೋಜಿ ಗೌಡ ಅವರನ್ನು ವಿಚಾರಣೆಗೊಳಪಡಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಚುನಾವಣೆ ನ್ಯಾಯೋಜಿತ ಮಾರ್ಗದಲ್ಲಿ ನಡೆಯುವ ವ್ಯವಸ್ಥೆ ರೂಪಿಸಲು ಆಗ್ರಹ ಪಡಿಸುವೆ ಎಂದಿದ್ದಾರೆ.

Previous articleಅವಳಿನಗರಕ್ಕೆ ಖಡಕ್ ಪೊಲೀಸ್ ಅಧಿಕಾರಿ ಕೊಡಿ
Next articleಇಂದೆ ಕೊನೆ ದಿನ: 2 ಪಕ್ಷಗಳಿಗೆ ತಟ್ಟಲಿದೆಯಾ ಬಂಡಾಯದ ಬಿಸಿ