ನಿಮ್ಮ ಸ್ನೇಹಿತ ನಮ್ಮ ಜನರನ್ನು ಗುಲಾಮರ ರೀತಿ ಟ್ರೀಟ್ ಮಾಡುತ್ತಿರುವುದು ಸರಿಯಲ್ಲ
ಕಲಬುರಗಿ: ಪ್ರಧಾನಿ ಮೋದಿ ಅಮೆರಿಕ ಪ್ರವಾಸದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದು, ಮೋದಿ ಅವರು ಯಾವಾಗ ಅಮೆರಿಕಕ್ಕೆ ಹೋಗಿದ್ದಾರೆ ಅವರು ಸ್ವತಹ ಹೇಳುತ್ತಾರೆ. ಟ್ರಂಪ್ ನಮ್ಮ ಸ್ನೇಹಿತ ಇದ್ದಾರೆ. ಹಾಗಾದರೆ ಎಲ್ಲಾ ಸರಿ ಹೋಗಲಿದೆ.
ನಾವು ಇಬ್ಬರು ಕೂಡಿ ಬಗೆಹರಿಸಲಿದ್ದೇವೆ ಎಂದು ಹೇಳುವುದು ಸರಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಖರ್ಗೆ ಅವರ ನಿವಾಸದಲ್ಲಿ ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಅಲ್ಲಿಗೆ ಹೋಗಿದ್ದು, ಅವರು ಯಾವ, ಯಾವ ವಿಷಯ ಮಾತನಾಡ್ತಾರೆ ನಮಗೆ ಗೊತ್ತಿಲ್ಲ. ಆದರೆ ಹಿಂದುಸ್ತಾನ ದೇಶ ಎನ್ನುವುದು ಶಾಶ್ವತವಾಗಿ ಇರಲಿದೆ. ಅಮೆರಿಕಾ ಪರ್ಮೆಂಟ್ ಇದೆ. ಆದರೆ ವ್ಯಕ್ತಿ ಗಳು ಬರುತ್ತಾರೆ ಹೋಗುತ್ತಾರೆ, ಮೊದಲು ಟ್ರಂಪ್ ಬಂದು ಹೋದರು, ಈಗ ಬಂದಿದ್ದಾರೆ. ಮೋದಿ ಇಂದು ಇದ್ದಾರೆ, ನಾಳೆ ಇರುವುದಿಲ್ಲ, ಆದರೆ ದೇಶ ಇರಲಿದೆ ದೇಶದ ಹಿತದ ಬಗ್ಗೆ ವಿಚಾರ ಮಾಡಬೇಕು ಎಂದು ಸಲಹೆ ನೀಡಿದರು.
ಮೋದಿ ಯಾವಗಲು ಹೇಳ್ತಾರೆ ಟ್ರಂಪ್ ನನ್ನ ಸ್ನೇಹಿತ, ಅವರು ನನ್ನ ಮಾತು ಕೇಳುತ್ತಾರೆ ಎನ್ನುವುದು ಸರಿ ಇಲ್ಲ. ಒಂದು ವೇಳೆ ಅವರು ನಿಮ್ಮ ಮಾತು ಕೇಳುತ್ತಿದರೆ ನಿಮ್ಮನ್ನು ಕೇಳದೆ ಅಕ್ರಮ ವರದಿಗಳನ್ನು ಏಕೆ ಕಳುಹಿಸುತ್ತಿದ್ದಾರೆ. ಕೈ ಕಾಲಿಗೆ ಬೇಡಿ ಹಾಕಿ ಕಳುಹಿಸುತ್ತಿದ್ದಾರೆ, ರೆಗ್ಯೂಲರ್ ಪ್ಲೈಟ್‌ನಲ್ಲಿ ಕಳುಹಿಸುವುದು ಬಿಟ್ಟು ಗೂಡ್ಸ್ ಪ್ಲೈಟ್‌ನಲ್ಲಿ ಕಳುಹಿಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ನಿಮ್ಮ ಸ್ನೇಹಿತ ನಮ್ಮ ಜನರನ್ನು ಗುಲಾಮರ ರೀತಿ ಟ್ರೀಟ್ ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಮೋದಿ ಗಂಭೀರ ವಿಚಾರ ಇರಬೇಕು ಎಂದು ಕಿವಿಮಾತು ಹೇಳಿದರು.
ಬೇರೆ ಬೇರೆ ಸಣ್ಣ ದೇಶಗಳಿವೆ. ತಮ್ಮ ವಿಮಾನಗಳನ್ನು ಕಳುಹಿಸಿ ಜನರನ್ನು ಕರೆಸಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ ಅವರು ನಮ್ಮ ವಿಮಾನ ಕಳುಹಿಸಿ ಅಲ್ಲಿನ ಜನರನ್ನು ಕರೆಸಿಕೊಳ್ಳುವ ವ್ಯವಸ್ಥೆ ಮಾಡಬಹುದಾಗಿತ್ತು ಎಂದು ವಿವರಿಸಿದರು.