ನವದೆಹಲಿ: ಟಿ20 ವಿಶ್ವಕಪ್ ಚಾಂಪಿಯನ್ ಟೀಂ ಇಂಡಿಯಾ ಇಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ಭಾರತ ಕ್ರಿಕೆಟ್ ತಂಡವನ್ನು ಉಪಹಾರಕ್ಕೆ ಆಹ್ವಾನಿಸಿದ್ದರು. ಕಳೆದ ಶನಿವಾರ ಫೈನಲ್ ಪಂದ್ಯದ ಬಳಿಕ ಪ್ರಧಾನಿ ಮೋದಿ ಅವರು ವಿಶ್ವಕಪ್ ಗಾಗಿ ಭಾರತ ತಂಡಕ್ಕೆ ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದ್ದರು. ಪಿಎಂ ಮೋದಿಯವರನ್ನು ಭೇಟಿಯಾದ ನಂತರ ತಂಡವು ಮುಂಬೈಗೆ ತೆರಳಲಿದೆ, ಅಲ್ಲಿ ಬಿಸಿಸಿಐ ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆವರೆಗೆ 1 ಕಿಮೀ ವಿಜಯೋತ್ಸವದ ಮೆರವಣಿಗೆ ಸಾಗಲಿದೆ, ಬಳಿಕ ವಾಂಖೆಡೆ ಮೈದಾನದಲ್ಲಿ ವಿಜಯೋತ್ಸವ ಆಚರಿಸಲಾಗುವುದು.