ಪ್ರತಿ ಮನೆಯಲ್ಲೂ ವಿದ್ಯುತ್ ಉತ್ಪಾದಕತೆ…

0
19

ಬೆಂಗಳೂರು: ಭಾರತದ ಪ್ರತಿ ಮನೆಯನ್ನು ವಿದ್ಯುತ್ ಉತ್ಪಾದಕನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಸೂರ್ಯ ಘರ್ ಯೋಜನೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಭಾರತದ ನಿವ್ವಳ ಶೂನ್ಯ ಭವಿಷ್ಯಕ್ಕೆ ಬಲ ನೀಡುತ್ತಿದೆ ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ ಬಿಜ್ಲಿ ಯೋಜನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ ಈ ಯೋಜನೆಯು ಭಾರತದ ಪ್ರತಿ ಮನೆಯನ್ನು ವಿದ್ಯುತ್ ಉತ್ಪಾದಕನಾಗಿ ಪರಿವರ್ತಿಸಲು ಹೊರಟಿದೆ. ಯೋಜನೆಯಿಂದಾಗಿ ನಾಗರೀಕರಿಗೆ ಶೂನ್ಯ ವಿದ್ಯುತ್ ಬಿಲ್ ಜೊತೆಗೆ ಹೆಚ್ಚಳ ವಿದ್ಯುತ್ ಉತ್ಪಾದನೆಯಿಂದ ಆದಾಯವು ತರಲಿದೆ. ಈಗಾಗಲೇ 3.5 ಲಕ್ಷ ಮನೆಗಳು ಈ ಯೋಜನೆ ಅಡಿ ಸೌರ ಮೇಲ್ಚಾವಣಿಯನ್ನು ಅಳವಡಿಸಿಕೊಂಡಿವೆ ಎಂದಿದ್ದಾರೆ.

Previous articleಕಲ್ಯಾಣ ಕರ್ನಾಟಕಕ್ಕೆ ಪ್ರಾದೇಶಿಕ ನ್ಯಾಯ ನೀಡಿರುವುದು ನಮ್ಮ ಪಾಲಿಗೆ ಹೆಮ್ಮೆ
Next articleಕಲ್ಯಾಣ ಕರ್ನಾಟಕದ ಜನತೆಯ ಪ್ರಶ್ನೆಗಳಿಗೆ ಉತ್ತರಿಸಿ