ಪೋಸ್ಟ್‌ ಮಾಸ್ಟರ್ ಆತ್ಮಹತ್ಯೆ

0
34

ಹಾವೇರಿ(ಶಿಗ್ಗಾಂವಿ): ಯುವತಿಯೋರ್ವಳು ನೇಣಿಗೆ ಶರಣಾದ ಘಟನೆ ತಾಲೂಕಿನ ಗಂಗೀಭಾಂವಿ ಕೆಎಸ್‌ಆರ್‌ಪಿ ೧೦ನೇ ಮೀಸಲು ಪೊಲೀಸ್ ಪಡೆಯ ವಸತಿ ಗೃಹದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಸೌಮ್ಯ ಲಕ್ಷ್ಮಣ್ಣ ಅಚಿಸೂರ(೨೩) ನೇಣಿಗೆ ಶರಣಾದವರೆನ್ನಲಾಗಿದ್ದು, ಗಂಗೀಭಾಂವಿಯಲ್ಲಿ ವಾಸವಾಗಿದ್ದರು. ಕುನ್ನೂರ ಗ್ರಾಮದ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದು, ದಿನಾಲು ಕುನ್ನೂರಿಂದ ಗಂಗೀಭಾಂವಿಗೆ ಓಡಾಡುತ್ತಿದ್ದರು.
ಮಾ. ೧೫ರಂದು ಕುನ್ನೂರ ಗ್ರಾಮದ ಪೂಜಾ ಅನ್ನುವವರ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಿ ಮಾ. 16ರಂದು ಮರಳಿ ಗಂಗಿಭಾಂವಿಗೆ ಬಂದಿದ್ದರು. ಅಂದು ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆಂದು ಹೇಳಲಾಗಿದೆ. ಉರುಲು ಬಿಗಿದು ಜೋತಾಡುತ್ತಾ ಒದ್ದಾಡುತ್ತಿದ್ದಾಗ ಮನೆಯ ಅಕ್ಕಪಕ್ಕದವರು ನೋಡಿ ತಕ್ಷಣ ಶಿಗ್ಗಾಂವಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Previous articleಕ್ಷುಲ್ಲಕ ಕಾರಣಕ್ಕೆ ಅಣ್ಣನನ್ನೇ ಕೊಂದ ತಮ್ಮ
Next articleಪವಾಡಪುರುಷ ಯಮನೂರ ಚಾಂಗದೇವ