ಪೊಲೀಸ್ ಭದ್ರತೆ ನಡುವೆ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗೆ ಮುತ್ತಿಕ್ಕಿದ ಯುವಕ

0
24

ಮಂಗಳೂರು: ಪೊಲೀಸ್ ಭದ್ರತೆ ನಡೆವೆಯೇ ಯುವಕನೊಬ್ಬ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗೆ ಮುತ್ತಿಕ್ಕಿರುವ ಘಟನೆ ನಡೆದಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಶಾಫಿ ಬೆಳ್ಳಾರೆಯನ್ನು ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿದ್ದರು. ಆ ವೇಳೆ ಕೋರ್ಟ್ ಆವರಣದಲ್ಲಿ ಪೊಲೀಸರ ಭದ್ರತೆ ನಡುವೆ ಯುವಕನೊಬ್ಬ ಬಂದು ಆರೋಪಿ ಶಾಫಿ ಬೆಳ್ಳಾರೆ ಹಣೆಗೆ ಮುತ್ತು ಕೊಟ್ಟಿದ್ದಾನೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿ ಶಾಫಿ ಬೆಳ್ಳಾರೆ ಈಗಾಗಲೇ ಎನ್‌ಐಎಯಿಂದ ಬಂಧನವಾಗಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆದರೆ ೨೦೧೭ರಲ್ಲಿ ಆರ್.ಎಸ್.ಎಸ್ ಹಾಗೂ ಕಲ್ಲಡ್ಕ ಭಟ್ ವಿರುದ್ಧ ಅವಹೇನಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಟಿ ವಾರೆಂಟ್ ಮೇಲೆ ಪೊಲೀಸರು ಶಾಫಿ ಬೆಳ್ಳಾರೆಯನ್ನ ಕರೆದುಕೊಂಡು ಬಂದು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿದರು. ಈ ವೇಲೆ ಈ ಮುತ್ತು ಕೊಟ್ಟಿರುವ ಘಟನೆ ನಡೆದಿದೆ.

Previous articleಜನಾಕ್ರೋಶ ಯಾತ್ರೆ ಹೊರಟವರ ಮುಂದೆ ಈಗ ಇರುವುದು ಎರಡೇ ಆಯ್ಕೆ
Next articleಅಪ್ರಾಪ್ತ ಬಾಲಕನಿಗೆ ಥಳಿತ ಪ್ರಕರಣ:೯ ಜನರ ಬಂಧನ