ಪೊಲೀಸ್ ಪೇದೆ ಮೇಲೆ ಶಾಸಕಿಯ ಪುತ್ರ-ಸಹೋದರರಿಂದ ಹಲ್ಲೆ

0
25

ರಾಯಚೂರು: ಪೊಲೀಸ್ ಪೇದೆಯೊಬ್ಬರ ಮೇಲೆ ಶಾಸಕಿ ಕರಿಯಮ್ಮ ನಾಯಕ ಅವರ ಪುತ್ರ ಹಾಗೂ ಸಹೋದರರು ಹಲ್ಲೆ ಮಾಡಿದ ಘಟನೆ ಭಾನುವಾರ ದೇವದುರ್ಗ ಪಟ್ಟಣದಲ್ಲಿ ನಡೆದಿದೆ. ಹಲ್ಲೆಗೊಳಗಾದ ದೇವದುರ್ಗ ಠಾಣೆ ಪೊಲೀಸ್ ಹನುಮಂತರಾಯ ಎಂದು ಗುರುತಿಸಲಾಗಿದೆ.
ಕೃಷ್ಣಾನದಿ ತೀರದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರಾಕ್ಟರ್ ಜಪ್ತಿ ಮಾಡಿಕೊಂಡು ಪೊಲೀಸ್ ಪೇದೆ ಹನುಮಂತರಾಯ ಅವರು ಠಾಣೆಗೆ ಕರೆದುತಂದಿದ್ದಾರೆ. ಟ್ರ್ಯಾಕ್ಟರ್ ಜಪ್ತಿ ಮಾಡಿರುವ ಬಗ್ಗೆ ಆಕ್ರೋಶಗೊಂಡ ಶಾಸಕಿ ಕರಿಯಮ್ಮ ನಾಯಕ ಅವರ ಪುತ್ರ ಸಂತೋಷ ಹಾಗೂ ಸಹೋದರರಾದ ತಿಮ್ಮಾರೆಡ್ಡಿ, ರಾಮಣ್ಣ ನಾಯಕ ಮತ್ತು ಬೆಂಬಲಿಗರು ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರಕ್ಕೆ ಪೊಲೀಸ್ ಪೇದೆಯನ್ನು ಕರೆಸಿ ಕೊಠಡಿಯ ಬಾಗಲು ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹಲ್ಲೆಗೊಳಗಾದ ಪೊಲೀಸ್ ಪೇದೆ ಹನುಮಂತರಾಯ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಲು ಪ್ರಕ್ರಿಯೆಗಳ
ನಡೆದಿವೆ ಎಂದು ತಿಳಿದುಬಂದಿದೆ.

Previous articleನಮ್ಮದು ಸಾಮಾಜಿಕ ಬದ್ಧತೆಯುಳ್ಳ ಸರ್ಕಾರ
Next articleವೈಭವದ ಸುತ್ತೂರು ಜಾತ್ರೆಗೆ ತೆರೆ