ಪೊಲೀಸ್ ಪೇದೆ ನಯಾಜ್ ಅಂಜುಮ್‌ಗೆ ರಾಷ್ಟ್ರಪತಿ ಪದಕ

0
31

ಚಿಕ್ಕಮಗಳೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಪೇದೆ ನಯಾಜ್ ಅಂಜುಮ್ ರಾಷ್ಟ್ರಪತಿಗಳ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಭಾನುವಾರ ನಗರದ ಸುಭಾಷ್‌ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ನಡೆದ ೭೬ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ನಯಾಜ್ ಅಂಜುಮ್ ಸಶಸ್ತ್ರ ಪೊಲೀಸ್ ಕಾನ್ಸ್‌ಸ್ಟೇಬಲ್ ಆಗಿ ಕರ್ತವ್ಯಕ್ಕೆ ಸೇರಿದ ಅವರು, ೨೨ವರ್ಷ ೩ ತಿಂಗಳು ಸೇವೆ ಸಲ್ಲಿ ಸಿದ್ದು, ಸದ್ಯ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತನಿಖಾಧಿಕಾರಿಗಳಿಗೆ ಕರೆ ವಿವರಗಳ ದಾಖಲೆ, ಐಪಿಡಿಆರ್‌ಗಳು, ಮೊಬೈಲ್ ಟವರ್‌ಗಳ ಡೇಟಾ, ಗೇಟ್ ವೇ ಡೇಟಾ, ಇ-ವ್ಯಾಲೆಟ್‌ಗಳು, ಸಾಮಾಜಿಕ ಮಾಧ್ಯಮಗಳ ಪ್ಲಾಟ್ ಫಾರಂ ಸೇರಿದಂತೆ ಗಮನಾರ್ಹ ಸಂವೇದನಶೀಲ ಕ್ರಿಮಿನಲ್ ಪ್ರಕರಣಗಳ ಪತ್ತೆ ಹಚ್ಚುವಿಕೆಯಲ್ಲಿ ತನಿಖಾಧಿಕಾರಿಗಳಿಗೆ ಸಹಕರಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಪದಕ ನೀಡಿ ಪುರಸ್ಕಾರಿಸಿದೆ.

Previous articleಪದ್ಮಶ್ರೀ ಪ್ರಶಸ್ತಿಗೆ ಬಾಜನರಾದ ವೆಂಕಪ್ಪ ಅಂಬಾಜಿಗೆ ಗೌರವ ಸನ್ಮಾನ
Next articleಮಂತ್ರಾಲಯದ ಗುರುಸಾರ್ವಭೌಮ ವಿದ್ಯಾಪೀಠದ ಕುಲಪತಿಗೆ ಅತ್ಯುನ್ನತ ಗೌರವ