ಪೊಲೀಸ್ ಪೇದೆಯ ಕೊರಳಪಟ್ಟಿ ಹಿಡಿದು ಹಲ್ಲೆ

0
8

ಪಾಂಡವಪುರ: ಪೊಲೀಸ್ ಠಾಣೆಯಲ್ಲಿಯೇ ಯುವಕನೊಬ್ಬ ಪೊಲೀಸ್ ಪೇದೆಯ ಕೊರಳಪಟ್ಟಿ ಹಿಡಿದು ಹಲ್ಲೆ ನಡೆಸಿರುವ ಘಟನೆ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಪಟ್ಟಣದ ಹಿರೋಡೆ ಬೀದಿಯ ಪಿ.ಎಸ್.ಜಗದೀಶ್ ಅವರ ಪುತ್ರ ಸಾಗರ್(30) ಎಂಬ ಯುವಕನೇ ಪೊಲೀಸ್ ಪೇದೆ ಅಭಿಷೇಕ್ ಅವರ ಮೇಲೆ ಹಲ್ಲೆ ನಡೆಸಿರುವವನಾಗಿದ್ದಾನೆ.
ಪೊಲೀಸ್ ಅಭಿಷೇಕ ಅವರ ಮೇಲೆ ಹಲ್ಲೆ ನಡೆಸಿರುವ ಸಾಗರ್ ಅವರನ್ನು ಬಂಧಿಸಲಾಗಿದ್ದು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆಯ ವಿವರ: ಪಟ್ಟಣದ ಲಕ್ಷ್ಮೀನಾರಾಯಣ ಹಾಗೂ ಸಾಗರ್ ಅವರ ನಡುವೆ ಜಮೀನಿನ ವಿಚಾರವಾಗಿ ಜಗಳವಾಗಿದೆ. ಈ ಸಂಬಂಧ ಲಕ್ಷ್ಮೀನಾರಾಯಣ ಅವರು ಸಾಗರ ಅವರ ಮೇಲೆ ದೂರು ದಾಖಲಿಸಿದ್ದರು.
ಇದಕ್ಕೆ ಸಂಬಂಧಪಟ್ಟಂತೆ ಲಕ್ಷ್ಮೀನಾರಾಯಣ ಮತ್ತು ಸಾಗರ್ ಅವರನ್ನು ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಠಾಣೆಯ ಆವರಣದಲ್ಲಿ ಸಾರ್ವಜನಿಕರಿಗಾಗಿ ಹಾಕಿರುವ ಆಸನಗಳಲ್ಲಿ ಲಕ್ಷ್ಮೀನಾರಾಯಣ ಮತ್ತು ಸಾಗರ ಅವರು ಕುಳಿತುಕೊಳ್ಳುವ ವಿಚಾರದಲ್ಲಿ ಮಾತಿಗೆ ಮಾತು ನಡೆದಿದೆ. ಸಾಗರ್ ಅವರು ಲಕ್ಷ್ಮೀನಾರಾಯುಣ ಅವರಿಗೆ ಹೊಡೆಯುಲು ಮುಂದಾಗಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸ್ ಅಭಿಷೇಕ್ ಅವರು ಸಾಗರ ಅವರನ್ನು ತಳ್ಳಿ ಸಮಾದಾನಪಡಿಸಲು ಯತ್ನಿಸಿದ್ದಾರೆ.
ಆದರೆ ಮೊದಲೇ ಕೋಪಗೊಂಡಿದ್ದ ಸಾಗರ್ ಅವರು ಪೊಲೀಸ್ ಅಭಿಷೇಕ್ ಅವರ ಕೊರಳಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾರೆ. ಕರ್ತವ್ಯದಲ್ಲೇ ಇದ್ದ ಪೊಲೀಸರುಗಳಾದ ಲಕ್ಷ್ಮೀ ಮತ್ತು ಆನಂದ ಅವರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಮುಂದಾಗಿದ್ದಾರೆ. ಆದರೆ ಸಾಗರ್ ಅವರು ನನ್ನ ವಿಚಾರಕ್ಕೆ ಬರಬೇಡಿ ಎಂದು ಪೊಲೀಸರಾದ ಲಕ್ಷ್ಮೀ ಮತ್ತು ಆನಂದ ಅವರಿಗೂ ಹೆದರಿಸಿದ್ದಾರೆ. ಅಲ್ಲದೇ ಕುಡಿಯುವ ನೀರಿನ ಕ್ಯಾನ್‌ ಎತ್ತಿಕೊಂಡು ಬಿಸಾಡಿದ್ದಾರೆ. ಇದರಿಂದಾಗಿ ಕ್ಯಾನಿನ ನೀರು ಟೇಬಲ್ ಮೇಲಿದ್ದ ಪೊಲೀಸ್ ದಾಖಲೆಗಳ ಮೇಲೆ ಬಿದ್ದಿದ್ದು ಹಾಳಾಗಿವೆ.
ಬಳಿಕ ಪೊಲೀಸ್ ಅಭಿಷೇಕ್ ಅವರು ಸಾಗರ್ ಮೇಲೆ ನೀಡಿದ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸಾಗರ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Previous articleಶೋಕದಲ್ಲಿ ಸಂಭ್ರಮ ಬೇಡ
Next articleಪಠ್ಯೇತರ ಚಟುವಟಿಕೆಯೇ ಮೂಲಮಂತ್ರ