ಗದಗ: ಪ್ರಕರಣವೊಂದರ ವಿಚಾರಣೆಗೆಂದು ಗಂಗಾವತಿಗೆ ಪೊಲೀಸರು ಕರೆದೊಯ್ಯುವ ಸಂದರ್ಭದಲ್ಲಿ ಗೂಂಡಾಗಳು ಸಿನಿಮೀಯ ಮಾದರಿಯಲ್ಲಿ ವಾಹನದ ಮೇಲೆ ದಾಳಿ ಮಾಡಿ ಅರೋಪಿಯನ್ನು ಎಸ್ಕೇಪ್ ಮಾಡಿದ ಪ್ರಕರಣ ಮುದ್ರಣ ನಗರಿ ಗದಗನಲ್ಲಿ ನಡೆದಿದೆ.
ಬೆಟಗೇರಿಯ ಅಮ್ಜದಾಲಿ ಎಂಬ ಯುವಕ ನನ್ನು ವಿಚಾರಣೆಗೆ ಕರೆದೊಯ್ಯುವಾಗ ನಿನ್ನೆ ತಡರಾತ್ರಿ ಬೆಟಗೇರಿ ಅಂಡರಬ್ರಿಜ್ನಲ್ಲಿ ನಡೆದಿದೆ.
ಈ ಘಟನೆಯಲ್ಲಿಗಂಗಾವತಿಯ ನಾಲ್ವರು ಮಕ್ಕಳು ಪೋಲೀಸರಿಗೆ ಗಾಯಗಳಾಗಿದ್ದು,ಚಿಕಿತ್ಸೆಗಾಗಿ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.
ಅಸ್ಪತ್ರೆಗೆ ಎಸ್ಪಿ ಬಾಬಾಸಾಹೇಬ ನೇಮಗೌಡ ಭೇಟಿ ನೀಡಿ ಅರೋಗ್ಯ ವಿಚಾರಿಸಿದರು.
ಪೊಲೀಸರ ಮೇಲೆ ಹಲ್ಲೆ ಮಾಡಿದ ಗೂಂಡಾಗಳ ಬಂಧನಕ್ಕೆ ಎಸ್ಪಿ ವಿಶೇಷ ತಂಡ ರಚಿಸಿದ್ದಾರೆ.