ಪೇಸಿಎಸ್, ಪೇಡಿಸಿಎಂ‌ ಅಭಿಯಾನಕ್ಕೆ ಶೆಟ್ಟರ ವ್ಯಂಗ್ಯ

0
5
ಶೆಟ್ಟರ್

ಹುಬ್ಬಳ್ಳಿ: ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಆರಂಭಿಸಿರುವ ಪೇಸಿಎಸ್ ಮತ್ತು ಪೇಡಿಸಿಎಂ ಅಭಿಯಾನದ ಬಗ್ಗೆ ಮಾಜಿ ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ನಾಲ್ಕು ವರ್ಷ ಆಡಳಿತ ನಡೆಸಿದ ಬಳಿಕ ಅದರ ಭ್ರಷ್ಟಾಚಾರದ ಕರ್ಮಕಾಂಡದ ಕುರಿತು ಕಾಂಗ್ರೆಸ್ ಪೇಸಿಎಂ ಅಭಿಮಾನ ಮಾಡಿತ್ತು. ಆದರೆ, ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಮೂರು ತಿಂಗಳು ಕೂಡಾ ಪೂರ್ಣ ಆಗಿಲ್ಲ. ನಿರಾಧಾರವಾಗಿ ಪೇಸಿಎಸ್, ಪೇಡಿಸಿಎಂ ಅಭಿಯಾನ ನಡೆಸಿದ್ದಾರೆ. ಈ ಅಭಿಯಾನವನ್ನು ರಾಜ್ಯದ ಜನರು ನಂಬಲ್ಲ ಎಂದರು.
ಬಿಜೆಪಿ ಸರ್ಕಾರದ ರಾಡಿ
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಬೇಕಾಬಿಟ್ಟಿ ಕಾಮಗಾರಿಗೆ ಮಂಜೂರು ನೀಡಿದ್ದರು. ಅದಕ್ಕೆ ಹಣಕಾಸು ಇಲಾಖೆ ಒಪ್ಪಿಗೆಯೂ ಇರಲಿಲ್ಲ. ಆ ಕಾಮಗಾರಿ ಬಿಲ್ ಬಾಕಿ ಬಗ್ಗೆ ಗುತ್ತಿಗೆದಾರರು ಕೇಳುತ್ತಿದ್ದಾರೆ. ಬಿಜೆಪಿ ಸರ್ಕಾರದ ರಾಡಿ ಇದು ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳು ಕೂಡಾ ಆಗಿಲ್ಲ. ಈ ಸರ್ಕಾರದ ಕಾಮಗಾರಿ ಬಿಲ್ ಬಾಕಿ ಇರಲು ಹೇಗೆ ಸಾಧ್ಯ? ಎಂದು ಶೆಟ್ಟರ ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20ಕ್ಕೂ ಸ್ಥಾನ ಗೆಲ್ಲುವ ಗುರಿಯನ್ನು ಪಕ್ಷ ಹೊಂದಿದೆ. ಈಚೆಗೆ ಪಕ್ಷದ ನಾಯಕರು ಕರೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಪಕ್ಷದ ವರಿಷ್ಠರು, ರಾಜ್ಯದ ನಾಯಕರು ಏನು ಹೇಳುತ್ತಾರೊ ಆ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಶೆಟ್ಟರ ಹೇಳಿದರು.

Previous articleಶ್ಯಾನುಭೋಗರ ಮಾತು ಕೇಳಿದ್ದರೆ ನಾನು ಲಾಯರ್‌ ಆಗುತ್ತಿರಲಿಲ್ಲ
Next articleವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ