ಪುರಸಭೆ ಸದಸ್ಯ ರಾಜೀನಾಮೆ

0
17

ಕುಷ್ಟಗಿ: ಸರ್ವೋಚ್ಛ ನ್ಯಾಯಾಲಯದ ಆದೇಶವಿದ್ದರೂ ಎಸ್‌ಸಿ ಒಳಮೀಸಲಾತಿ ವರ್ಗೀಕರಣ ಮಾಡದೇ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸಿ ಪಟ್ಟಣದ ನಾಲ್ಕನೇ ವಾರ್ಡಿನ ಪುರಸಭೆ ಸದಸ್ಯ ವಸಂತ ಮೇಲಿನಮನಿ ತಮ್ಮ ಸ್ಥಾನಕ್ಕೆ ಗುರುವಾರ ರಾಜೀನಾಮೆ ಸಲ್ಲಿಸಿದರು.
ಪುರಸಭೆ ಅಧ್ಯಕ್ಷ ಮಹಾಂತೇಶ ಕಲ್ಲಭಾವಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ ಅವರು, ಪ್ರಸ್ತುತ ಕುಷ್ಟಗಿ ಪುರಸಭೆ ವಾರ್ಡ್ ನಂ. ೪ರ ಸದಸ್ಯರಾಗಿದ್ದರು. ಸ್ವ-ಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದರು.
ಈ ವೇಳೆ ವಸಂತ ಮೇಲಿಮನಿ ಮಾತನಾಡಿ, ಒಳಮೀಸಲು ವರ್ಗೀಕರಣ ಹೋರಾಟಗಳಲ್ಲೂ ಭಾಗವಹಿಸುತ್ತಾ ಹಕ್ಕು ವಂಚಿತ ಅಸ್ಪೃಶ್ಯರಿಗೆ ಒಳಮೀಸಲಾತಿಯ ಅನಿವಾರ್ಯತೆ ಅರಿತು ನಾವೆಲ್ಲ ದಶಕಗಳಿಂದ ವರ್ಗೀಕರಣದ ಆಸೆ ಇಟ್ಟುಕೊಂಡೆವು. ಸುಪ್ರೀಂಕೋರ್ಟ್ ಜಡ್ಜ್ಮೆಂಟ್ ನಂತರ ಹೊಸ ಆಶಾವಾದವು ಇನ್ನಷ್ಟು ಗಟ್ಟಿಯಾಯಿತು. ಕಾಂಗ್ರೆಸ್ ಮೊದಲಿಂದಲೂ ಒಳಮೀಸಲಾತಿ ನಾವೇ ಮಾಡುವುದು ಎಂದು ಹೇಳಿ ಹೇಳಿ ವಿಳಂಬನೀತಿ ಅನುಸರಿಸುತ್ತಲೇ ಅದರ ಪರವಾಗಿ ಬದ್ಧತೆಯಿಂದ ಇಲ್ಲ ಎಂಬುದು ಎಲ್ಲರಿಗೂ ಬಹಿರಂಗವಾಗಿ ತೋರಿಸಿಕೊಟ್ಟಿತು. ಆದರೆ, ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೇನೆ ಎಂದು ವಸಂತ ಮೇಲಿನಮನಿ ತಿಳಿಸಿದರು.
ಕೆಲವು ದಿನಗಳ ಹಿಂದೆ ದಲಿತ ಸಾಹಿತಿ, ಹೋರಾಟಗಾರರಾದ ಸಿ. ದಾನಪ್ಪ ನಿಲೋಗಲ್ ಅವರು ಸಹ ಮಸ್ಕಿಯಲ್ಲಿ ವರ್ಗೀಕರಣ ವಿರೋಧಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಎಂದು ಹೇಳಿಕೆಕೊಟ್ಟದ್ದು, ಆ ಸಮಯದಲ್ಲಿ ನೆನೆಯಬಹುದು. ಹಾಗಾಗಿ ಸಾಮಾಜಿಕ ನ್ಯಾಯದ ಬಗ್ಗೆ ಅಸಡ್ಡೆ ಇರುವ ಪಕ್ಷದಲ್ಲಿರಲು ನನಗೆ ಇರಲು ಮನಸ್ಸು ಒಪ್ಪದೇ ಇರುವ ಕಾರಣ ಈ ನಿರ್ಧಾರಕ್ಕೆ ಬಂದು ಎಸ್‌ಸಿ ವರ್ಗೀಕರಣ ಹೋರಾಟದಲ್ಲಿ ಇನ್ನು ಮುಂದೆ ಮುಕ್ತವಾಗಿ, ಮೈಚಳಿಬಿಟ್ಟು ನ್ಯಾಯಯುತ ಸಂಘರ್ಷದಲ್ಲಿ ತೊಡಗಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

Previous articleಅಕ್ರಮ ಮದ್ಯ ಜಫ್ತಿ: 8 ಜನರ ಬಂಧನ
Next articleತಲೆಮರೆಸಿಕೊಂಡಿದ್ದ ಆರೋಪಿ ಕಿಲ್ಲೇದಾರ ಕೋರ್ಟ್‌ಗೆ ಹಾಜರು